ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಬ್, ಅಕ್ಷಯ್ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ: ನಾನಾ ಪಟೋಲೆ

Last Updated 18 ಫೆಬ್ರುವರಿ 2021, 12:41 IST
ಅಕ್ಷರ ಗಾತ್ರ

ಮುಂಬೈ: ತೈಲ ಬೆಲೆ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವ ಮಾಡದ ಕಾರಣ ಬಾಲಿವುಡ್‌ ನಟರಾದ ಅಮಿತಾಬ್‌ ಬಚ್ಚನ್‌ ಹಾಗೂ ಅಕ್ಷಯ್‌ ಕುಮಾರ್‌ ವಿರುದ್ಧ ಗುಡುಗಿರುವ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಈ ನಾಯಕರ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುರುವಾರ ಬೆದರಿಕೆ ಹಾಕಿದ್ದಾರೆ.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಆದ ಸಂದರ್ಭದಲ್ಲಿ ಈ ಇಬ್ಬರೂ ನಾಯಕರು ಟ್ವೀಟ್‌ ಮೂಲಕ ಟೀಕಿಸಿದ್ದನ್ನು ಪಟೋಲೆ ಉಲ್ಲೇಖಿಸಿದ್ದಾರೆ.

‘ಈ ನಾಯಕ ನಟರ ಚಲನಚಿತ್ರಗಳನ್ನು ಮಹಾರಾಷ್ಟ್ರದಲ್ಲಿ ಚಿತ್ರೀಕರಿಸಲು ನಾವು ಅನುಮತಿಸುವುದಿಲ್ಲ. ಅವರ ಚಿತ್ರವನ್ನು ಮಹಾರಾಷ್ಟ್ರದಲ್ಲಿ ಪ್ರದರ್ಶಿಸಲು ಸಹ ಅವಕಾಶ ನೀಡುವುದಿಲ್ಲ’ ಎಂದು ಅಕ್ರಮಣಕಾರಿ ನಿಲುವನ್ನು ಪ್ರಕಟಿಸಿರುವ ಪಟೋಲೆ, ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಾಗುತ್ತಿರುವಾಗ ಅವರು ಈಗ ಏಕೆ ಟ್ವೀಟ್ ಮಾಡುತ್ತಿಲ್ಲ? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ.

‘ಯುಪಿಎ ಸರ್ಕಾರದ ಅವಧಿಯಲ್ಲಿನ ದರಗಳಿಗೆ ಹೋಲಿಸಿದರೆ, ಬಿಜೆಪಿ ಆಡಳಿತದ 7 ವರ್ಷಗಳ ಅವಧಿಯಲ್ಲಿ ತೈಲ ದರ ದ್ವಿಗುಣವಾಗಿದೆ. ಆ ಸಮಯದಲ್ಲಿ ಈ ಎಲ್ಲ ಖ್ಯಾತನಾಮರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು, ಆದರೆ ಈಗ ಅವರು ಬಿಜೆಪಿಗೆ ಹೆದರುತ್ತಿದ್ದಾರೆ. ಯುಪಿಎ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತ ನೀಡುತ್ತಿತ್ತು. ಅದಕ್ಕಾಗಿಯೇ ಬಚ್ಚನ್ ಮತ್ತು ಕುಮಾರ್ ಹಾಗೂ ಇತರ ಅನೇಕ ಖ್ಯಾತನಾಮರು ಸರ್ಕಾದ ವಿರುದ್ಧ ಭಯವಿಲ್ಲದೆ ಧ್ವನಿ ಎತ್ತುತ್ತಿದ್ದರು. ಇಂದು, ಅವರು ಬಿಜೆಪಿಯ ಕೈಗೊಂಬೆಗಳಾಗಿದ್ದಾರೆ’ ಎಂದು ಆರೋಪಿಸಿದರು.

‘ಸೆಲೆಬ್ರಿಟಿಗಳು ಇನ್ನು ಮುಂದೆ ಹಣದುಬ್ಬರ, ಇಂಧನ ಬೆಲೆಗಳು, ರೈತರು ಮತ್ತು ಸಮಾಜದ ಇತರ ವರ್ಗಗಳ ವಿರುದ್ಧದ ದೌರ್ಜನ್ಯದ ಬಗ್ಗೆ ಮಾತನಾಡದಿರಬಹುದು. ಆದರೆ, ವಿಶ್ವದಾದ್ಯಂತ ಜನರು ರೈತರಿಗೆ ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಪಟೋಲೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌, ‘ಪ್ರಚಾರಕ್ಕಾಗಿ ಮಾತ್ರ ಕೆಲವರು ಹೇಳಿಕೆ ನೀಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, 2017ರಲ್ಲಿ ಪಟೋಲೆ ಅವರು ಬಿಜೆಪಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT