ಚಂಡೀಗಡ: ನಾನು ಪಲಾಯನವಾದಿ ಅಲ್ಲ. ಜಗತ್ತಿನ ಮುಂದೆ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದು ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಮತ್ತೊಂದು ವಿಡಿಯೊದಲ್ಲಿ ಹೇಳಿದ್ದಾರೆ.
ನಾನು ಪರಾರಿಯಾಗಿದ್ದೇನೆ. ನನ್ನ ಸಹಚರರನ್ನು ತೊರೆದಿದ್ದೇನೆ ಎಂದು ಭಾವಿಸುವವರು ಭ್ರಮೆಯಲ್ಲಿ ಇರುತ್ತಾರೆ. ನಾನು ಸಾವಿಗೆ ಹೆದರುವುದಿಲ್ಲ ಎಂದು ಪಂಜಾಬ್ ಭಾಷೆಯಲ್ಲಿ ತಿಳಿಸಿದ್ದಾರೆ.
ನಾನು ಹಿಂದೆಯೂ ಹೆದರಿಲ್ಲ. ಇನ್ನೂ ಮುಂದೆಯೂ ಹೆದರುವುದಿಲ್ಲ ಎಂದು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ. ಅವರು ಏನೂ ಬೇಕಾದರೂ ಮಾಡಬಹುದು. ಆದರೆ ತಲೆಮರೆಸಿಕೊಳ್ಳುವ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.
ಸಿಖ್ ಧರ್ಮಕ್ಕೆ ಸೇರಿದ ಎಲ್ಲರೂ ಒಗ್ಗೂಡುವ ಸಮಯವಿದು. ಸಿಖ್ ಸಂಘಟನೆಗಳಲ್ಲಿ ಏಕತೆ ಕಾಪಾಡುವಂತೆ ಜಾತೇದಾರ್‌ಗೆ (ಸಂಘಟನೆಯ ಮುಖ್ಯಸ್ಥರು) ಕರೆ ನೀಡಿದ್ದಾರೆ.
ಹಿಂದೆ ಮಾಡಿದಂತೆ ಈಗಲೂ ರಾಜಕೀಯ ಮುಂದುವರಿಸಿ ಜಾತೇದಾರ್ ಆಗುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.