ಸೋಮವಾರ, ಜೂನ್ 21, 2021
28 °C
ವಿಪ್ರೊ ಕಂಪನಿಯೊಂದಿಗೆ ಟ್ರಾನ್ಸೆಲ್‌ ಆಂಕೊಲೊಜಿಕ್ಸ್‌ ಸಹಭಾಗಿತ್ವ

ಲಸಿಕೆ ಸುರಕ್ಷತೆ ಮೌಲ್ಯಮಾಪನಕ್ಕೆ ‘ಎಐ‘ ಬಳಕೆ: ವಿಪ್ರೊ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟ್ರಾನ್ಸೆಲ್‌ ಆಂಕೊಲೊಜಿಕ್ಸ್‌ ಸಹಭಾಗಿತ್ವದಲ್ಲಿ ವರ್ಧಿತ ಬುದ್ದಿಮತ್ತೆ (‌Augmented Intelligence) ಉಪಯೋಗಿಸಿಕೊಂಡು ‘ಲಸಿಕೆ ಸುರಕ್ಷತಾ ಮೌಲ್ಯಮಾಪನ‘ ಮಾಡಲು ನಿರ್ಧರಿಸಿರುವುದಾಗಿ ಪ್ರಸಿದ್ಧ ಐಟಿ ಕಂಪನಿ ವಿಪ್ರೊ ಪ್ರಕಟಿಸಿದೆ.

ಈ ಸಹಭಾಗಿತ್ವದಲ್ಲಿ ಟ್ರಾನ್‌ಸೆಲ್ಸ್‌ನ ಸ್ಟೆಮ್‌ ಸೆಲ್ ಟೆಕ್ನಾಲಜಿಯನ್ನು ವಿಪ್ರೊ ಕಂಪನಿಯ ‘ಹೊಲ್ಮೆಸ್‌‘ ಎಐ ಸಾಮರ್ಥ್ಯದೊಂದಿಗೆ ಸಂಯೋಜಿಸಲಾಗಿದೆ. ಈ ಮೂಲಕ ‘ಜಾಗತಿಕ ಲಸಿಕೆ ರೋಗನಿರೋಧಕ ಕಾರ್ಯಕ್ರಮಗಳ‘ ಸುರಕ್ಷತೆಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ‘ ಎಂದು ಐಟಿ ದಿಗ್ಗಜ ವಿಪ್ರೊ ಕಂಪನಿ ತಿಳಿಸಿದೆ. 

‘ಲಸಿಕೆ ಅಭಿವೃದ್ಧಿ ಪ್ರಕ್ರಿಯೆಗೆ ಎಐ ಅನ್ವಯಿಸುವ ಈ ತಂತ್ರಜ್ಞಾನ, ಲಸಿಕೆಗಳಿಂದ ನರವ್ಯೂಹದ ಮೇಲೆ( ನ್ಯೂರೊವೈರುಲೆಂಟ್‌) ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಊಹಿಸಲು ಸಾಧ್ಯವಾಗುತ್ತದೆ‘ ಎಂದು ಬೆಂಗಳೂರಿನ ವಿಪ್ರೊ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಲಸಿಕೆಯ ಸುರಕ್ಷತೆಯನ್ನು ಅಳೆಯುವ ಅಥವಾ ಮೌಲ್ಯಮಾಪನ ಪ್ರಕ್ರಿಯೆ ಪ್ರಾಣಿಗಳ ಮೇಲೆ ನಡೆಸಿ ಮಾಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು