ಮಂಗಳವಾರ, ಮಾರ್ಚ್ 21, 2023
25 °C

ಫೇಸ್‌ಬುಕ್ ಸ್ನೇಹಿತನಿಂದ ₹22 ಲಕ್ಷ ಕಳೆದುಕೊಂಡ ಮಹಿಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಥಾಣೆ (ಮಹಾರಾಷ್ಟ್ರ): ನಗರದಲ್ಲಿ ವಾಸವಾಗಿರುವ 36 ವರ್ಷದ ಮಹಿಳೆಯೊಬ್ಬರು ಫೇಸ್‌ಬುಕ್ ಸ್ನೇಹಿತನಿಂದಾಗಿ ₹22.67 ಲಕ್ಷ ವಂಚನೆಗೆ ಒಳಗಾಗಿದ್ದಾರೆ.  

ಆನ್‌ಲೈನ್‌ ಎಕ್ಸಿಕ್ಯೂಟ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಗೆ  ಕಳೆದ ವರ್ಷ ಫೆಬ್ರುವರಿಯಲ್ಲಿ ಆತ ಫೇಸ್‌ಬುಕ್‌ನಲ್ಲಿ ಪರಿಚಯವಾಯಿತು. ನಂತರ ಪ್ರತಿ ನಿತ್ಯ ಆನ್ ಲೈನ್‌ನಲ್ಲಿ  ಚಾಟ್ ಮಾಡುತ್ತಿದ್ದರು. ಆರೋಪಿಯು ತನ್ನ ತಾಯಿ ಚಿಕಿತ್ಸೆಯಾಗಿ ತುರ್ತಾಗಿ ಹಣ ನೀಡುವಂತೆ ಮನವಿ ಮಾಡಿದ್ದನು.

ಸಂತ್ರಸ್ತೆ ಮೊದಲು 7,25,000 ರೂಪಾಯಿ, ಬಳಿಕ 15,42,688 ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ನೀಡಿದ್ದಾರೆ. ನಂತರ ಆರೋಪಿಯು ಆಕೆಯ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದನು. ಈ ವಂಚನೆ ಅರಿತ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಶೀಘ್ರ  ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.                          

 ಇದನ್ನು ಓದಿ:    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು