ಗುರುವಾರ , ಆಗಸ್ಟ್ 5, 2021
28 °C
ಮುಂಬೈನ ಚಂಡಿವಾಲಿಯಲ್ಲಿ ಘಟನೆ

12 ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಮಹಿಳೆ ಆತ್ಮಹತ್ಯೆ: ಕಾರಣ ಕೇಳಿದರೆ ಕನಿಕರ

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಪಕ್ಕದ ಮನೆಯವರ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ 12 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಚಂಡಿವಾಲಿಯಲ್ಲಿ ಮಂಗಳವಾರ ನಡೆದಿದೆ.

ರೇಷ್ಮಾ ತ್ರೆಂಚಿಲ್ (44) ಎಂಬ ಮಹಿಳೆ ಹಾಗೂ ಆರು ವರ್ಷದ ಮಗು ಮೃತರಾಗಿದ್ದಾರೆ.

‘ಮಗು ಜೋರಾಗಿ ಅಳುತ್ತೆ, ಇದರಿಂದ ನಮಗೆ ಕಿರಿಕಿರಿ ಆಗುತ್ತೆ ಎಂದು ಪದೇ ಪದೇ ಅಕ್ಕ–ಪಕ್ಕದ ಮನೆಯವರು ನಮಗೆ ಕಿರುಕುಳ ಕೊಡುತ್ತಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ‘ ಎಂದು  ರೇಷ್ಮಾ ಡೆತ್‌ನೋಟ್ ಬರೆದಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೇಷ್ಮಾ ಪಕ್ಕದ ಮನೆಯ 33 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಳೆದ ಮೇ ನಲ್ಲಿ ರೇಷ್ಮಾ ಅವರ ಗಂಡ ಶರತ್ ಮುಳಕುತ್ಲಾ ಅವರು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು