ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಮೇಲೆ ಮಂತ್ರವಾದಿಯಿಂದ 79 ದಿನಗಳ ಕಾಲ ನಿರಂತರ ಅತ್ಯಾಚಾರ

Last Updated 7 ಮೇ 2022, 9:06 IST
ಅಕ್ಷರ ಗಾತ್ರ

ಬಾಲಾಸೋರ್: ಮಹಿಳೆ ಮೇಲೆ ಮಂತ್ರವಾದಿಯೊಬ್ಬ ಆಕೆಯ ಎರಡು ವರ್ಷದ ಮಗುವಿನ ಎದುರಲ್ಲೇ 79 ದಿನಗಳ ಕಾಲ ಅತ್ಯಾಚಾರ ಎಸಗಿರುವ ಪ್ರಕರಣ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗನನ್ನು ಮಂತ್ರವಾದಿಯ ಕೊಠಡಿಯಿಂದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮಂತ್ರವಾದಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಹಿಳೆ ಮತ್ತು ಗಂಡನ ಮನೆಯವರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಆಕೆಯ ಪತಿ ಮತ್ತು ಅತ್ತೆ, ಮಂತ್ರವಾದಿಯೊಂದಿಗೆ ಇರುವಂತೆ ಒತ್ತಾಯಿಸಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

2017ರಲ್ಲಿ ವಿವಾಹವಾಗಿದ್ದ ಮಹಿಳೆ ತನ್ನ ಗಂಡನ ಮನೆಯವರು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕೆಲ ತಿಂಗಳ ಕಾಲ ಮಹಿಳೆ ತನ್ನ ಜೊತೆಗಿದ್ದರೆ ಕುಟುಂಬದ ಮನಸ್ತಾಪ ಬಗೆಹರಿಸುವುದಾಗಿ ಮಾಂತ್ರಿಕ ಹೇಳಿದ್ದ ಎಂದು ತಿಳಿದುಬಂದಿದೆ.

ಇದಕ್ಕೆ ವಿರೋಧಿಸಿದಾಗ ನನಗೆ ಮತ್ತು ಬರುವ ಔಷಧ ನೀಡಲಾಗಿತ್ತು. ನಂತರ, ಎಚ್ಚರವಾದಾಗ ನಾನು ಮಾಂತ್ರಿಕನ ಕೊಠಡಿಯಲ್ಲಿದ್ದೆ, ನನ್ನ ಮಗನೂ ಅಲ್ಲಿಯೇ ಇದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ಮೇಲೆ ಮಂತ್ರಿವಾದಿ 79 ದಿನಗಳ ಕಾಲ ಮಗನ ಮುಂದೆಯೇ ಅತ್ಯಾಚಾರ ಎಸಗಿದ್ದಾನೆ.

ಏಪ್ರಿಲ್ 28ರಂದು ಮಂತ್ರವಾದಿ ಮೊಬೈಲ್ ಬಿಟ್ಟುಹೋಗಿದ್ದನ್ನು ಗಮನಿಸಿದ ಮಹಿಳೆ, ಮೊಬೈಲ್ ತೆಗೆದುಕೊಂಡು ಫೋಷಕರಿಗೆ ಕರೆ ಮಾಡಿ ತನ್ನ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ ಮಂತ್ರವಾದಿ ಮನೆಯಿಂದ ಪರಾರಿಯಾಗಿದ್ದ. ಸದ್ಯ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT