ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಪಾರ್ಥ ಚಟರ್ಜಿಯತ್ತ ಶೂ ಎಸೆದ ಮಹಿಳೆ

Last Updated 2 ಆಗಸ್ಟ್ 2022, 14:12 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರತ್ತ ಮಹಿಳೆಯೊಬ್ಬರು ಮಂಗಳವಾರ ಶೂಗಳನ್ನು ಎಸೆದಿದ್ದಾರೆ.

ಇ.ಡಿ ಅಧಿಕಾರಿಗಳುಆರೋಗ್ಯ ತಪಾಸಣೆಗೆಂದು ಪಾರ್ಥ ಅವರನ್ನು ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮಹಿಳೆ ತನ್ನ ಎರಡೂ ಶೂಗಳನ್ನು ಎಸೆದಿದ್ದಾರೆ. ಅವು ಪಾರ್ಥ ಅವರಿಗೆ ತಗುಲಿಲ್ಲ.

‘ಶೂಗಳಿಂದ ಪಾರ್ಥ ಅವರಿಗೆ ಹೊಡೆಯಬೇಕೆಂದು ಆಸ್ಪತ್ರೆ ಬಳಿ ಬಂದಿದ್ದೆ. ಕೋಲ್ಕತ್ತದ ವಿವಿಧೆಡೆ ವಸತಿ ಸಮುಚ್ಚಯಗಳನ್ನು ನಿರ್ಮಿಸಿರುವ ಅವರು ಅಲ್ಲಿ ಕೋಟ್ಯಂತರ ರೂಪಾಯಿ ಬಚ್ಚಿಟ್ಟಿದ್ದಾರೆ. ಲಕ್ಷಾಂತರ ಜನ ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವಾಗ, ಜನರನ್ನು ವಂಚಿಸಿರುವ ಅವರು ಈಗಲೂ ಎ.ಸಿ.ಕಾರಿನಲ್ಲೇ ಓಡಾಡುತ್ತಿದ್ದಾರೆ. ಇಂತಹವರನ್ನು ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದಾಡಬೇಕು’ ಎಂದು ಅಮತಲದ ನಿವಾಸಿಯಾಗಿರುವ ಶುಭ್ರ ಘೊರುಯಿ ಕಿಡಿಕಾರಿದ್ದಾರೆ.

‘ಇದು ಕೇವಲ ನನ್ನೊಬ್ಬಳ ಸಿಟ್ಟಲ್ಲ. ನನ್ನಂತೆ ಪಶ್ಚಿಮ ಬಂಗಾಳದ ಲಕ್ಷಾಂತರ ಮಂದಿಗೆ ಇವರ ಮೇಲೆ ಕೋಪವಿದೆ. ಶೂಗಳು ಪಾರ್ಥ ಅವರಿಗೆ ತಾಗಿದ್ದರೆ ತುಂಬಾ ಸಂತೋಷವಾಗುತ್ತಿತ್ತು. ಆ ಶೂಗಳನ್ನು ಮತ್ತೆ ಧರಿಸುವುದಿಲ್ಲ. ಬರಿಗಾಲಿನಲ್ಲೇ ಮನೆಗೆ ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT