ಮಂಗಳವಾರ, ಜನವರಿ 26, 2021
27 °C

ಗುಜರಾತ್‌ನಲ್ಲಿ ಮದ್ಯ ಸೇವಿಸುತ್ತಿರುವ ಮಹಿಳೆಯರ ಸಂಖ್ಯೆ ದುಪ್ಪಟ್ಟು!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಮದ್ಯ ಮಾರಾಟ ನಿಷೇಧವಾಗಿರುವ ಗುಜರಾತ್‌ನಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ಮದ್ಯ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ ಎಂದು 2019–20 ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ (ಎನ್‌ಎಫ್‌ಎಚ್‌ಎಸ್‌–5) ಬಹಿರಂಗವಾಗಿದೆ.

ಒಟ್ಟು 33,343 ಮಹಿಳೆಯರು ಹಾಗೂ 5,351 ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2015–16ರಲ್ಲಿ ನಡೆದ ಎನ್‌ಎಫ್‌ಎಚ್‌ಎಸ್‌–4ರಲ್ಲಿ 68 ಮಹಿಳೆಯರು ಮದ್ಯ ಸೇವನೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಪ್ರಸ್ತುತ ಈ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಎನ್‌ಎಚ್‌ಎಫ್‌ಎಸ್‌–4ರಲ್ಲಿ 22,932 ಮಹಿಳೆಯರು ಹಾಗೂ 5,574 ಪುರುಷರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. 

ಎನ್‌ಎಚ್‌ಎಫ್‌ಎಸ್‌–4ಕ್ಕೆ ಹೋಲಿಸಿದರೆ, ಮದ್ಯ ಸೇವಿಸಿದ ಪುರುಷರ ಸಂಖ್ಯೆ ಇದೇ ಅವಧಿಯಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. 2015–16ರ ಸಮೀಕ್ಷೆಯಲ್ಲಿ 618 ಪುರುಷರು ಮದ್ಯ ಸೇವಿಸಿದ್ದೇವೆ ಎಂದು ಹೇಳಿದ್ದರು. ಈ ಸಂಖ್ಯೆ ಇದೀಗ 310ಕ್ಕೆ ಇಳಿಕೆಯಾಗಿದೆ. 

‘ಪಾರ್ಟಿ ಸಂಸ್ಕೃತಿ ಹಾಗೂ ಸಮಾಜವು ಮಹಿಳೆಯರು ಮದ್ಯ ಸೇವನೆ ಮಾಡುವುದನ್ನು ಒಪ್ಪಿಕೊಳ್ಳುತ್ತಿರುವ ಕಾರಣ, ಮದ್ಯ ಸೇವನೆ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಈ ಹಿಂದೆ ಮದ್ಯ ಸೇವನೆ ಮಾಡಲು ಪುರುಷರು ಹೊರಹೋಗುತ್ತಿದ್ದರು. ಇದೀಗ ಕುಟುಂಬದ ಕಾರ್ಯಕ್ರಮಗಳಲ್ಲೂ ಮದ್ಯ ಸೇವನೆಯ ಸಂಸ್ಕೃತಿ ಬಂದಿದೆ’ ಎಂದು ಸಮಾಜಶಾಸ್ತ್ರಜ್ಞರಾದ ಗೌರಂಗ್‌ ಜಾನಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು