ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಇಳಾ ಭಟ್ ನಿಧನ

Last Updated 2 ನವೆಂಬರ್ 2022, 13:34 IST
ಅಕ್ಷರ ಗಾತ್ರ

ಅಹಮದಾಬಾದ್: ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಮಹಿಳಾ ಸ್ವಯಂ ಉದ್ಯೋಗಿಗಳ ಸಂಘದ (ಎಸ್‌ಇಡಬ್ಲ್ಯುಎ) ಸಂಸ್ಥಾಪಕಿ ಇಳಾ ಭಟ್ (89) ಅವರು ಬುಧವಾರ ಇಲ್ಲಿ ನಿಧನರಾದರು.

ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ವಕೀಲರೂ ಆಗಿದ್ದ ಇಳಾ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದ್ದವು.

‘ಮಹಿಳಾ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿದ ಇಳಾ ಭಟ್ ಅವರ ಪರಂಪರೆಯನ್ನು ನಾವು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇವೆ’ ಎಂದು ಎಸ್‌ಇಡಬ್ಲ್ಯುಎ ಭಾರತ್ ಟ್ವೀಟ್ ಮಾಡಿದೆ.

ಪ್ರಧಾನಿ ಸಂತಾಪ: ಇಳಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಮಹಿಳಾ ಸಬಲೀಕರಣ, ಸಮಾಜ ಸೇವೆ ಮತ್ತು ಯುವಜನರ ಶಿಕ್ಷಣಕ್ಕಾಗಿಮಾಡಿರುವ ಕೆಲಸಕ್ಕಾಗಿ ದೀರ್ಘಕಾಲ ಅವರು ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಮೋದಿ ಗುಜರಾತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT