ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ರೈಲ್ವೆಗೆ ವಿಶ್ವಬ್ಯಾಂಕ್‌ನಿಂದ ₹ 1,917 ಕೋಟಿ ಸಾಲ

Last Updated 23 ಜೂನ್ 2022, 14:37 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರೈಲ್ವೆಯ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್‌ ಮೌಲಸೌಕರ್ಯ ಆಧುನೀಕರಿಸಲು ವಿಶ್ವಬ್ಯಾಂಕ್‌ ₹ 1,917 ಕೋಟಿ (245 ಮಿಲಿಯನ್‌ ಡಾಲರ್‌) ಸಾಲವನ್ನು ಅನುಮೋದಿಸಿದೆ.

ರೈಲ್ವೆ ಲಾಜಿಸ್ಟಿಕ್ಸ್‌ ಯೋಜನೆಯು ಭಾರತದಲ್ಲಿ ರಸ್ತೆಯ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಸರಕು ಸಾಗಣೆ ಮತ್ತು ಪ್ರಯಾಣಿಕರಿಗೆ ಹೆಚ್ಚು ಪರಿಣಾಮಕಾರಿ ಸೇವೆ ಒದಗಿಸುವ ಮೂಲಕ ಪ್ರತಿ ವರ್ಷ ಲಕ್ಷಾಂತರ ಟನ್‌ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು (ಜಿಎಚ್‌ಜಿ) ಕಡಿಮೆ ಮಾಡುತ್ತದೆ.ಈ ಯೋಜನೆಯು ರೈಲ್ವೆ ವಲಯದಲ್ಲಿ ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನೂ ಉತ್ತೇಜಿಸುತ್ತದೆ ಎಂದು ವಿಶ್ವಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್‌ನಿಂದ (ಐಬಿಆರ್‌ಡಿ) ದೊರೆಯುವ ₹ 1,917 ಕೋಟಿ ಸಾಲದ ಮರುಪಾವತಿ ಅವಧಿ 22 ವರ್ಷಗಳಾಗಿವೆ. ಐಬಿಆರ್‌ಡಿಯು ವಿಶ್ವಸಂಸ್ಥೆಯ ಅಂಗಸಂಸ್ಥೆ.

ಮಾರ್ಚ್ 2020ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ 1.2 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾಗಿ ಮಾರ್ಪಟ್ಟಿದೆ.ಆದರೂ, ಭಾರತದ ಸರಕು ಸಾಗಣೆಯ ಶೇ 71ರಷ್ಟು ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಕೇವಲ ಶೇ 17ರಷ್ಟು ಮಾತ್ರ ರೈಲು ಮೂಲಕ ಸಾಗಣೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT