ಗುರುವಾರ , ಆಗಸ್ಟ್ 18, 2022
25 °C

ವಾರಾಣಸಿ: ಆದಿತ್ಯನಾಥ್‌ ಅವರ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಪಿಟಿಐ Updated:

ಅಕ್ಷರ ಗಾತ್ರ : | |

ವಾರಾಣಸಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದ ಘಟನೆ ವಾರಾಣಸಿಯಲ್ಲಿ ವರದಿಯಾಗಿದೆ. ಭಾನುವಾರ ಹಕ್ಕಿಯೊಂದು ಹೆಲಿಕಾಪ್ಟರ್‌ಗೆ ಬಡಿದ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ವಾರಾಣಸಿಯಿಂದ ಲಖನೌಗೆ ಸಿಎಂ ಆದಿತ್ಯನಾಥ್‌ ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದಾಗ ಹಕ್ಕಿಯೊಂದು ಡಿಕ್ಕಿಯಾಗಿದ್ದು, ಪರಿಣಾಮವಾಗಿ ತುರ್ತು ಭೂಸ್ಪರ್ಶ ಮಾಡಲಾಯಿತು' ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೌಶಲ್‌ರಾಜ್‌ ಶರ್ಮಾ ತಿಳಿಸಿದ್ದಾರೆ.

ಶನಿವಾರ ಯೋಗಿ ಆದಿತ್ಯನಾಥ್‌ ಅವರು ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು