ಬುಧವಾರ, ಜೂನ್ 29, 2022
24 °C

ದೆಹಲಿ ಪೊಲೀಸ್ ಠಾಣೆಯಲ್ಲಿ ಐವರು ಪೊಲೀಸರಿಗೆ ಚೂರಿ ಇರಿತ

ಪಿಟಿಐ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ: ಪೊಲೀಸ್ ಠಾಣೆಗೆ ನುಗ್ಗಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಚೂರಿಯಿಂದ ಇರಿದ ಪ್ರಕರಣ ಪೂರ್ವ ದೆಹಲಿಯ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ.

ಬುಧವಾರ ಶಹಾದರದ ಪೊಲೀಸ್ ಠಾಣೆಗೆ ನುಗ್ಗಿದ್ದ ಆರೋಪಿ, ಮೊಬೈಲ್ ಫೋನ್‌ನಲ್ಲಿ ಠಾಣೆಯ ವಿಡಿಯೊ ಶೂಟಿಂಗ್ ಮಾಡುತ್ತಿದ್ದ.

ಅದನ್ನು ಪ್ರಶ್ನಿಸಿದಾಗ, ಏಕಾಏಕಿ ಆತ ಚೂರಿ ತೆಗೆದು ಪಕ್ಕದಲ್ಲಿದ್ದ ಪೊಲೀಸರಿಗೆ ಇರಿದಿದ್ದಾನೆ.

ಆರೋಪಿಯನ್ನು ಭರತ್ ಭಾಟಿ (28) ಎಂದು ಗುರುತಿಸಲಾಗಿದೆ.

ಚೂರಿ ಇರಿತಕ್ಕೆ ಒಳಗಾದ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ದೀಪಕ್, ಕಾನ್ಸ್‌ಟೆಬಲ್ ಅಮಿತ್, ಮನೀಷ್, ನರೇಶ್, ಸುನಿಲ್ ಮತ್ತು ಹೋಮ್‌ಗಾರ್ಡ್ ರವಿ ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸಂದರ್ಭ ಪೊಲೀಸ್ ಠಾಣೆಯಲ್ಲಿ ಎಂಟು ಮಹಿಳೆಯರ ಸಹಿತ 20 ಮಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು