ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್ ಸಹೋದರಿ ವೈ.ಎಸ್ ಶರ್ಮಿಳಾ ಅವರ ಹೊಸ ಪಕ್ಷ ಇಂದು ಅಸ್ತಿತ್ವಕ್ಕೆ

'ವೈ.ಎಸ್.ಆರ್ ತೆಲಂಗಾಣ ಪಾರ್ಟಿ' (YSRTP)
ಅಕ್ಷರ ಗಾತ್ರ

ಹೈದರಾಬಾದ್; ತೆಲಂಗಾಣದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಉಗಮಕ್ಕೆ ವೇದಿಕೆ ಸಿದ್ಧವಾಗಿದೆ. ಆಂಧ್ರಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಅವರ ಮಗಳು ಹಾಗೂ ಈಗಿನ ಆಂಧ್ರಪ್ರದೇಶದ ಸಿಎಂ ಜಗನ್ಮೋಹನ ರೆಡ್ಡಿ ಅವರ ತಂಗಿ ವೈ.ಎಸ್ ಶರ್ಮಿಳಾ ಇಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ತಮ್ಮ ಹೊಸ ಪಕ್ಷದ ಹೆಸರು, ಚಿನ್ಹೆ, ಧ್ಯೇಯ, ಸಿದ್ದಾಂತಗಳನ್ನು ಘೋಷಣೆ ಮಾಡಲಿದ್ದಾರೆ.

ತೆಲಂಗಾಣ ಗುರಿಯಾಗಿಸಿಕೊಂಡು ತಮ್ಮ ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ತರಬೇಕು ಎಂದು ಶರ್ಮಿಳಾಕಳೆದ ಆರು ತಿಂಗಳಿನಿಂದ ತಯಾರಿ ನಡೆಸಿದ್ದರು. ಜುಲೈ 8 ವೈ.ಎಸ್ ರಾಜಶೇಖರ ರೆಡ್ಡಿ ಅವರ ಜನ್ಮದಿನ ಇದೆ. ಇದೇ ದಿನವೇ ಶರ್ಮಿಳಾ ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡುತ್ತಿದ್ದಾರೆ.

ಮೂಲಗಳ ಪ್ರಕಾರ ಶರ್ಮಿಳಾ ಅವರ ಪಕ್ಷದ ಹೆಸರು 'ವೈ.ಎಸ್.ಆರ್ ತೆಲಂಗಾಣ ಪಾರ್ಟಿ' (YSRTP) ಎಂದು ಅಂತಿಮವಾಗಿದ್ದು ಘೋಷಣೆಯಷ್ಟೇ ಬಾಕಿ ಇದೆ. ಕೊರೊನಾ ಹಿನ್ನೆಲೆಯಲ್ಲಿ ಹೈದರಾಬಾದ್ ಖಾಸಗಿ ಸಮುದಾಯ ಭವನವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 4000 ಜನರಿಗೆ ಮಾತ್ರ ಆಹ್ವಾನ ಇದೆ ಎನ್ನಲಾಗಿದೆ. ಆದರೆ, ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಜನ ಭಾಗವಹಿಸಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದಕ್ಕೂ ಮುನ್ನ ಶರ್ಮಿಳಾ ಅವರು ತಮ್ಮ ತಂದೆಯ ಸಮಾದಿ ಸ್ಥಳವಾದ ಕಡಪಾ ಜಿಲ್ಲೆಯ ಇಡುಪಾಲಪಾಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಗುರುವಾರ ಮಧ್ಯಾಹ್ನ 3ಕ್ಕೆ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಶರ್ಮಿಳಾ ಅವರು ತಮ್ಮ ಪಕ್ಷದ ಮೊದಲ ಕಾರ್ಯಕ್ರಮಕ್ಕೆ ಬರಬೇಕು ಎಂದು ತೆಲಂಗಾಣದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ಶರ್ಮಿಳಾ ತಾಯಿ ವೈ.ಎಸ್ ವಿಜಯಮ್ಮ ಉಪಸ್ಥಿತರಿರಲಿದ್ದಾರೆ.

ಈಗಾಗಲೇ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷವಾದ ಟಿ.ಆರ್.ಎಸ್ ಗೆ ಶರ್ಮಿಳಾ ಅವರ ಹೊಸ ಪಕ್ಷ ಪೈಪೋಟಿ ಒಡ್ಡುವ ಗುರಿ ಹಾಕಿಕೊಂಡಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT