ಬುಧವಾರ, ಆಗಸ್ಟ್ 17, 2022
29 °C

3ನೇ ಹಂತದ ಕೋವಿಡ್-19 ಲಸಿಕೆ ಪ್ರಯೋಗ: ಜೈಡಸ್‌ ಕ್ಯಾಡಿಲಾಗೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ತಾನು ಅಭಿವೃದ್ಧಿಪಡಿಸಿರುವ ‘ಪೆಜಿಹೆಪ್‌’ ಲಸಿಕೆಯು ಕೋವಿಡ್‌ ಶಮನದ ಗುಣ ಹೊಂದಿದ್ದು, ಇದರ ಮಾನವನ ಮೇಲಿನ ಮೂರನೇ ಹಂತದ ಪ್ರಯೋಗಕ್ಕೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇಲಾಖೆ ಅನುಮತಿ ನೀಡಿದೆ’ ಎಂದು ಜೈಡಸ್‌ ಕ್ಯಾಡಿಲಾ ಸಂಸ್ಥೆಯು ಶುಕ್ರವಾರ ತಿಳಿಸಿದೆ.

ಈ ಸಂಸ್ಥೆಯು ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಕಳೆದ ತಿಂಗಳು ಪೂರ್ಣಗೊಳಿಸಿತ್ತು.

‘ಮಾನವನ ಮೇಲಿನ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಅನುಮತಿ ನೀಡಿದೆ. ದೇಶದ 20ರಿಂದ 25 ಕೇಂದ್ರಗಳಲ್ಲಿ ಆಯ್ದ 250 ಕೋವಿಡ್‌ ರೋಗಿಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ’ ಎಂದು ಜೈಡಸ್‌ ಕ್ಯಾಡಿಲಾ ಹೇಳಿದೆ.

‘ಪೆಜಿಹೆಪ್‌’ನ ಎರಡನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. ಈ ಲಸಿಕೆಯು ಕೊರೊನಾ ವೈರಾಣುವನ್ನು ಹತ್ತಿಕ್ಕುವ ಸಾಮರ್ಥ್ಯ ಹೊಂದಿದೆ. ಇದರಿಂದ ನಾವು ಉತ್ತೇಜಿತರಾಗಿದ್ದೇವೆ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆಗದಂತೆ ಎಚ್ಚರ ವಹಿಸಿದ್ದೇವೆ’ ಎಂದು ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್‌ನ ನಿರ್ದೇಶಕ ಶಾರ್ವಿಲ್‌ ಪಟೇಲ್‌ ನುಡಿದಿದ್ದಾರೆ.

‘ಮೆಕ್ಸಿಕೊದಲ್ಲೂ ನಾವು ಎರಡನೇ ಹಂತದ ಪ್ರಯೋಗ ಕೈಗೊಂಡಿದ್ದೇವೆ. ಅಮೆರಿಕದಲ್ಲೂ ಕ್ಲಿನಿಕಲ್‌ ಟ್ರಯಲ್‌ ನಡೆಸುವ ಗುರಿ ಹೊಂದಿದ್ದು, ಈ ಸಂಬಂಧ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ (ಯುಎಸ್‌ಎಫ್‌ಡಿಎ) ಜೊತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದೂ ಜೈಡಸ್‌ ಸಂಸ್ಥೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು