ಎಫ್‌ಎಒ ನಿರ್ದೇಶಕ ಸ್ಥಾನಕ್ಕೆ ರಮೇಶ್ ಚಾಂದ್ ಹೆಸರು

ಬುಧವಾರ, ಮಾರ್ಚ್ 27, 2019
26 °C

ಎಫ್‌ಎಒ ನಿರ್ದೇಶಕ ಸ್ಥಾನಕ್ಕೆ ರಮೇಶ್ ಚಾಂದ್ ಹೆಸರು

Published:
Updated:
Prajavani

ವಿಶ್ವಸಂಸ್ಥೆ: ನೀತಿ ಆಯೋಗದ ಸದಸ್ಯ ರಮೇಶ್ ಚಾಂದ್ ಅವರನ್ನು ವಿಶ್ವಸಂಸ್ಥೆಯ  ‘ಆಹಾರ ಮತ್ತು ಕೃಷಿ ಸಂಘಟನೆಯ’ (ಎಫ್‌ಎಒ) ಪ್ರಧಾನ ನಿರ್ದೇಶಕ ಸ್ಥಾನಕ್ಕೆ ಭಾರತ ಶಿಫಾರಸು ಮಾಡಿದೆ. 

ಎಲ್ಲರಿಗೂ ಆಹಾರ ಭದ್ರತೆ ಒದಗಿಸುವ ಗುರಿ ಸಾಧಿಸುವುದು ಈ ಸಂಘಟನೆಯ ಉದ್ದೇಶ.  ‘ಪ್ರಧಾನ ನಿರ್ದೇಶಕ ಸ್ಥಾನಕ್ಕೆ, ಸದಸ್ಯ ರಾಷ್ಟ್ರಗಳು ಐವರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿವೆ’ ಎಂದು ಸಂಘಟನೆ ಹೇಳಿದೆ. 

ಭಾರತದ ಜತೆಗೆ ಕೆಮರೂನ್, ಚೀನಾ, ಫ್ರಾನ್ಸ್ ಹಾಗೂ ಜಾರ್ಜಿಯಾ ಇದರ ಸದಸ್ಯ ರಾಷ್ಟ್ರಗಳಾಗಿವೆ. ನಾಲ್ಕು ವರ್ಷ ಅವಧಿಯ ಈ ಹುದ್ದೆಗೆ ಜೂನ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 

1945ರಲ್ಲಿ ಈ ಸಂಘಟನೆ ಆರಂಭವಾದಾಗಿನಿಂದ ಈ ತನಕ ಒಟ್ಟು 8 ಮಂದಿ ಪ್ರಧಾನ ನಿರ್ದೇಶಕರಾಗಿದ್ದು, 1956ರಿಂದ 1967ರ ಅವಧಿಗೆ ಭಾರತದ ಬಿನಯ್ ರಂಜನ್ ಸೇನ್ ಈ ಹುದ್ದೆ ನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !