ಉಗ್ರತ್ವ ವಿರುದ್ಧ ಹೋರಾಟ ತೀವ್ರ

ಶನಿವಾರ, ಮಾರ್ಚ್ 23, 2019
24 °C

ಉಗ್ರತ್ವ ವಿರುದ್ಧ ಹೋರಾಟ ತೀವ್ರ

Published:
Updated:

ಆಸಿನ್ಸಿಯಾನ್ : ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಭಾರತ ಮತ್ತು ಪೆರುಗ್ವೆ ಅಭಿಪ್ರಾಯಪಟ್ಟಿವೆ. 

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪೆರುಗ್ವೆಗೆ ಭೇಟಿ ನೀಡಿದ ವೇಳೆ ಅಧ್ಯಕ್ಷ ಮಾರಿಯೊ ಅಬ್ಡೊ ಬೆನಿಟೆಜ್, ಉ‍ಪಾಧ್ಯಕ್ಷ ಹ್ಯುಗೊ ವೆಲಾಕ್ವೆಜ್ ಅವರೊಂದಿಗೆ ಮಾತುಕತೆ ನಡೆಸಿದರು. 

ಪುಲ್ವಾಮಾ ದಾಳಿಯನ್ನು ಈ ವೇಳೆ ತೀವ್ರವಾಗಿ ಖಂಡಿಸಿರುವ ಪೆರುಗ್ವೆ, ವಿಶ್ವಸಂಸ್ಥೆ ಗುರುತಿಸಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ, ಪರಸ್ಪರ ಸಹಕಾರ ಹೆಚ್ಚಿಸುವುದಾಗಿ ಹೇಳಿದೆ. ಅಲ್ಲದೆ ಅಂತರರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಒಪ್ಪಂದವನ್ನು ಶೀಘ್ರ ಜಾರಿಗೆ ತರಲು ಕಾರ್ಯನಿರ್ವಹಿಸುವುದಾಗಿ ಈ ವೇಳೆ  ಉಭಯ ರಾಷ್ಟ್ರಗಳ ನಾಯಕರು ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !