ಅಮೆರಿಕ ಜತೆ ಒಪ್ಪಂದ: ದೇಶದಲ್ಲಿ 6 ಹೊಸ ಅಣು ವಿದ್ಯುತ್‌ ಸ್ಥಾವರ

ಸೋಮವಾರ, ಮಾರ್ಚ್ 18, 2019
31 °C
ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲ

ಅಮೆರಿಕ ಜತೆ ಒಪ್ಪಂದ: ದೇಶದಲ್ಲಿ 6 ಹೊಸ ಅಣು ವಿದ್ಯುತ್‌ ಸ್ಥಾವರ

Published:
Updated:
Prajavani

ವಾಷಿಂಗ್ಟನ್‌ (ಪಿಟಿಐ/ರಾಯಿಟರ್ಸ್‌): ಭಾರತದಲ್ಲಿ ಆರು ಅಣು ವಿದ್ಯುತ್‌ ಸ್ಥಾರಗಳನ್ನು ನಿರ್ಮಿಸಲು ಅಮೆರಿಕ ಒಪ್ಪಿಕೊಂಡಿದೆ.

ಇಲ್ಲಿ ನಡೆದ ಭಾರತ ಮತ್ತು ಅಮೆರಿಕದ ಭದ್ರತಾ ಸಮಾಲೋಚನೆ ಸಭೆಯಲ್ಲಿ ಉಭಯ ದೇಶಗಳು ಈ ಕುರಿತು ಒಪ್ಪಂದ ಮಾಡಿಕೊಂಡಿವೆ.

ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಮತ್ತು ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರ ರಾಷ್ಟ್ರಿಯ ಭದ್ರತಾ ವಿಭಾಗದ ಅಧೀನ ಕಾರ್ಯದರ್ಶಿ ಆ್ಯಂಡ್ರಿಯಾ ಥಾಮ್ಸನ್‌ ಜಂಟಿಯಾಗಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಯಾವ ಸ್ಥಳಗಳಲ್ಲಿ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ ಎನ್ನುವುದು ಬಹಿರಂಗಪಡಿಸಿಲ್ಲ.

ನಾಗರಿಕ ಪರಮಾಣು ಸಹಕಾರ ಮತ್ತು ದ್ವಿಪಕ್ಷೀಯ ಭದ್ರತೆಯನ್ನು ಬಲಿಷ್ಠಗೊಳಿಸಲು ಇದೇ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಅಣುಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಹಲವು ವರ್ಷಗಳಿಂದ ಮಾತುಕತೆಯಲ್ಲಿ ತೊಡಗಿದ್ದವು. ಆದರೆ, ಭಾರತದ ’ಹೊಣೆಗಾರಿಕೆ ನಿಯಮಗಳು’ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ರೂಪಿಸುವ ನಿಟ್ಟಿನಲ್ಲಿ ವಿಳಂಬವಾಗಿದ್ದರಿಂದ ಒಪ್ಪಂದಕ್ಕೆ ಅಡ್ಡಿಯಾಗಿತ್ತು.  ಒಂದು ವೇಳೆ ಅಪಘಾತ ಸಂಭವಿಸಿದರೆ ಅದರ ಹೊಣೆಯನ್ನು ನಿರ್ವಹಣೆದಾರರೇ ವಹಿಸಿಕೊಳ್ಳಬೇಕೇ ಹೊರತು ಅಣು ವಿದ್ಯುತ್‌ ಸ್ಥಾವರಗಳ ನಿರ್ಮಾಣದಾರರಿಗೆ ಸಂಬಂಧಿಸಿದ್ದಲ್ಲ ಎನ್ನುವ ಅಂತರರಾಷ್ಟ್ರೀಯ ನಿಯಮವನ್ನು ಈಗ ರೂಪಿಸಲಾಗಿದೆ.

ಪರಮಾಣು ಪೂರೈಕೆದಾರ ಒಕ್ಕೂಟದಲ್ಲಿ (ಎನ್‌ಎಸ್‌ಜಿ) ಭಾರತವನ್ನು ಸೇರಿಸಲು ಬಲವಾಗಿ ಬೆಂಬಲಿಸುವುದಾಗಿ ಅಮೆರಿಕ ಇದೇ ಸಂದರ್ಭದಲ್ಲಿ ತಿಳಿಸಿದೆ. 48 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಭಾರತ ಸದಸ್ಯತ್ವ ಪಡೆಯಲು ಚೀನಾ ವಿರೋಧಿಸುತ್ತಾ ಬಂದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !