ನ್ಯೂಜಿಲೆಂಡ್ ಎದುರಿನ ಎರಡನೇ ಟ್ವೆಂಟಿ–20: ತಿರುಗೇಟು ನೀಡುವ ಛಲದಲ್ಲಿ ಭಾರತ

7
ಕುಲದೀಪ್‌ಗೆ ಅವಕಾಶ?

ನ್ಯೂಜಿಲೆಂಡ್ ಎದುರಿನ ಎರಡನೇ ಟ್ವೆಂಟಿ–20: ತಿರುಗೇಟು ನೀಡುವ ಛಲದಲ್ಲಿ ಭಾರತ

Published:
Updated:
Prajavani

ಆಕ್ಲೆಂಡ್‌: ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾರತ ತಂಡ ನ್ಯೂಜಿಲೆಂಡ್ ಎದುರಿನ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ತಿರುಗೇಟು ನೀಡುವ ಛಲದಲ್ಲಿದೆ. ಇಲ್ಲಿನ ಈಡನ್ ಪಾರ್ಕ್‌ನಲ್ಲಿ ಶುಕ್ರವಾರ ಪಂದ್ಯ ನಡೆಯಲಿದ್ದು ಸರಣಿ ಗೆಲುವಿನ ಆಸೆಯೊಂದಿಗೆ ಆತಿಥೇಯರು ಕಣಕ್ಕೆ ಇಳಿಯಲಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ 80 ರನ್‌ಗಳಿಂದ ಸೋತಿತ್ತು. ಇದು, ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತದ ಈ ವರೆಗಿನ ಹೀನಾಯ ಸೋಲಾಗಿತ್ತು. ಪಂದ್ಯದಲ್ಲಿ ಭಾರತ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿತ್ತು. ಎದುರಾಳಿಗಳಿಗೆ ಬೌಲರ್‌ಗಳು 219 ರನ್‌ ಬಿಟ್ಟುಕೊಟ್ಟಿದ್ದರು. ಬ್ಯಾಟಿಂಗ್‌ನಲ್ಲಿ ಭಾರತದ ಯಾರೂ 40 ರನ್‌ಗಳಿಗಿಂತ ಅಧಿಕ ಮೊತ್ತ ಗಳಿಸಲಿಲ್ಲ.

ನಾಲ್ಕು ಓವರ್‌ಗಳಲ್ಲಿ 48 ರನ್‌ ಬಿಟ್ಟುಕೊಟ್ಟಿದ್ದ ಖಲೀಲ್ ಅಹಮ್ಮದ್ ಅವರ ಬದಲು ಸಿದ್ಧಾರ್ಥ್ ಕೌಲ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕೃಣಾಲ್ ಪಾಂಡ್ಯ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಸಾಮರ್ಥ್ಯ ತೋರಿ ದ್ದರು. ಆದರೂ ಇವರ ಪೈಕಿ ಒಬ್ಬರನ್ನು ಕೈಬಿಟ್ಟು ಕುಲದೀಪ್ ಯಾದವ್ ಅವರನ್ನು ಕರೆಸಿಕೊಳ್ಳುವುದು ಖಚಿತ.

ಎಂಟು ಪ್ರಮುಖ ಬ್ಯಾಟ್ಸ್‌ಮನ್‌ಗಳಿದ್ದರೂ ಮೊದಲ ಪಂದ್ಯದಲ್ಲಿ ಭಾರಿ ಅಂತರದಿಂದ ಸೋತ ಕಾರಣ ಭಾರತ ರೋಹಿತ್ ಶರ್ಮಾ ಬಳಗ ಬ್ಯಾಟಿಂಗ್‌ ಬಗ್ಗೆ ಮರುಚಿಂತನೆ ನಡೆಸಬೇಕಾಗಿದೆ.

ಆಲ್‌ರೌಂಡರ್‌ ವಿಜಯಶಂಕರ್‌ಗೆ ಬಡ್ತಿ ನೀಡಿ ಮೂರನೇ ಕ್ರಮಾಂಕದಲ್ಲಿ ಕಳುಹಿಸಲಾಗಿತ್ತು. ಅವರು 18 ಎಸೆತಗಳಲ್ಲಿ 27 ರನ್‌ ಗಳಿಸಿ ಮಿಂಚಿದ್ದರು. ಏಕದಿನ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಶುಭಮನ್ ಗಿಲ್‌ ಶುಕ್ರವಾರ ಅವಕಾಶ ಸಿಗುವ ಭರವಸೆಯಲ್ಲಿದ್ದಾರೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌, ರಿಷಭ್ ಪಂತ್‌, ದಿನೇಶ್ ಕಾರ್ತಿಕ್‌, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಭುನವೇಶ್ವರ್ ಕುಮಾರ್‌, ಸಿದ್ಧಾರ್ಥ್‌ ಕೌಲ್‌, ಖಲೀಲ್ ಅಹಮ್ಮದ್‌, ಶುಭಮನ್ ಗಿಲ್‌, ವಿಜಯಶಂಕರ್‌, ಹಾರ್ದಿಕ್‌ ಪಾಂಡ್ಯ, ಮೊಹಮ್ಮದ್ ಸಿರಾಜ್‌. ನ್ಯೂಜಿಲೆಂಡ್: ಕೇನ್ ವಿಲಿಯಮ್ಸ್‌ (ನಾಯಕ), ಡಗ್‌ ಬ್ರೇಸ್‌ವೆಲ್‌, ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌, ಲೋಕಿ ಫರ್ಗುಸನ್‌, ಸ್ಕಾಟ್‌ ಕುಗೆಲಿಜಿನ್‌, ಕಾಲಿನ್ ಮನ್ರೊ, ಡ್ಯಾರಿಲ್‌ ಮಿಷೆಲ್‌, ಮಿಷೆಲ್‌ ಸ್ಯಾಂಟನರ್‌, ಟಿಮ್‌ ಸೀಫರ್ಟ್‌, ಇಶ್ ಸೋಧಿ, ಟಿಮ್‌ ಸೌಥಿ, ರೋಸ್ ಟೇಲರ್‌, ಬ್ಲೇರ್ ಟಿಕ್ನರ್‌, ಜೇಮ್ಸ್ ನೀಶಮ್‌.

ಆರಂಭ: ಬೆಳಿಗ್ಗೆ 11.30 (ಭಾರತೀಯ ಕಾಲಮಾನ).

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !