6 ತಿಂಗಳಲ್ಲಿ 4.36 ಲಕ್ಷ ಸೈಬರ್ ದಾಳಿ

7

6 ತಿಂಗಳಲ್ಲಿ 4.36 ಲಕ್ಷ ಸೈಬರ್ ದಾಳಿ

Published:
Updated:

ನವದೆಹಲಿ: ರಷ್ಯಾ, ಅಮೆರಿಕ, ನೆದರ್ಲೆಂಡ್ಸ್ ಚೀನಾ ಹಾಗೂ ಜರ್ಮನಿಯ ಸೈಬರ್ ಅಪರಾಧಿಗಳಿಂದ ಭಾರತದ ಸುಮಾರು 4.36 ಲಕ್ಷ ಬಳಕೆದಾರರು ಸೈಬರ್ ದಾಳಿಗೆ ಈಡಾಗಿದ್ದಾರೆ ಎಂದು ಸೈಬರ್ ಭದ್ರತಾ ಸಂಸ್ಥೆ ಎಫ್–ಸೆಕ್ಯುರ್ ತಿಳಿಸಿದೆ. ಇಷ್ಟು ಪ್ರಕರಣಗಳು ವರದಿಯಾಗಿರುವುದು ಜನವರಿ ಮತ್ತು ಜೂನ್‌ ತಿಂಗಳ ಅವಧಿಯಲ್ಲಿ.

ಅಚ್ಚರಿಯೆಂದರೆ ಇದೇ ಅವಧಿಯಲ್ಲಿ ಭಾರತೀಯ ಸೈಬರ್ ಅಪರಾಧಿಗಳು ಆಸ್ಟ್ರಿಯಾ, ನೆದರ್ಲೆಂಡ್ಸ್, ಬ್ರಿಟನ್, ಜಪಾನ್ ಹಾಗೂ ಉಕ್ರೇನ್‌ನ 35 ಸಾವಿರ ಬಳಕೆದಾರರ ಮೇಲೆ ಸೈಬರ್ ದಾಳಿ ನಡೆಸಿದ್ದಾರೆ. 

ಸೈಬರ್ ದಾಳಿಗೆ ತುತ್ತಾದ ದೇಶಗಳ ಪೈಕಿ ಬ್ರಿಟನ್ ಮೊದಲ ಸ್ಥಾನದಲ್ಲಿದ್ದರೆ ಭಾರತ 21 ಸ್ಥಾನದಲ್ಲಿದೆ. ದಾಳಿ ಎಸಗುವ ದೇಶಗಳ ಪೈಕಿ ಭಾರತ 13ನೇ ಸ್ಥಾನದಲ್ಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !