ಅಮೆರಿಕಕ್ಕೆ ವಲಸಿಗರು ಕೊಡುಗೆ ಶ್ಲಾಘಿಸಿದ ಸಂಸದೆ

7
ಕಾಂಗ್ರೆಸ್‌ ಮಹಿಳಾ ಪ್ರತಿನಿಧಿ ಪ್ರಮೀಳಾ ಜಯಪಾಲ್‌

ಅಮೆರಿಕಕ್ಕೆ ವಲಸಿಗರು ಕೊಡುಗೆ ಶ್ಲಾಘಿಸಿದ ಸಂಸದೆ

Published:
Updated:

ವಾಷಿಂಗ್ಟನ್‌: ವಲಸಿಗರು ಅಮೆರಿಕಕ್ಕೆ ನೀಡುತ್ತಿರುವ ಮಹತ್ವದ ಕೊಡುಗೆಗೆ ಸಾಫ್ಟ್‌ವೇರ್‌ ಕ್ಷೇತ್ರದ ದೈತ್ಯ ಸಂಸ್ಥೆ ಗೂಗಲ್‌ ಅನ್ನು ಭಾರತೀಯ ಸಂಜಾತ ವ್ಯಕ್ತಿ ಮುನ್ನಡೆಸುತ್ತಿರುವುದೇ ಪ್ರಮುಖ ಉದಾಹರಣೆ ಎಂದು ಕಾಂಗ್ರೆಸ್‌ ಮಹಿಳಾ ಪ್ರತಿನಿಧಿ ಪ್ರಮೀಳಾ ಜಯಪಾಲ್‌ ಹೇಳಿದ್ದಾರೆ.

ಗೂಗಲ್‌ನ ಸರ್ಚ್‌ ಎಂಜಿನ್‌ನ ದತ್ತಾಂಶ ಖಾಸಗಿತನ ಕಾಯ್ದುಕೊಳ್ಳುವ ಸಂಬಂಧ ಅಮೆರಿಕದ ಜನಪ್ರತಿನಿಧಿಗಳ ಕಾಂಗ್ರೆಸ್‌ ವಿಚಾರಣಾ ಸಮಿತಿ ಮುಂದೆ ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಹಾಜರಾದಾಗ ವಿಚಾರಣಾ ಸಮಿತಿಯಲ್ಲಿದ್ದ ಪ್ರಮಿಳಾ ಜಯಪಾಲ್‌ ಅವರು ತಾವಿಬ್ಬರೂ ಒಂದೇ ರಾಜ್ಯದವರು ಎನ್ನುವ ಸಂಗತಿಯನ್ನು ಪಿಚ್ಚೈ ಅವರೊಂದಿಗೆ ಹಂಚಿಕೊಂಡು, ಸಂಭ್ರಮ ಪಟ್ಟಿದ್ದಾರೆ.

ಭಾರತದ ತಮಿಳುನಾಡು ರಾಜ್ಯದಲ್ಲಿ ಜನಿಸಿದವರಾದ ಈ ಇಬ್ಬರೂ ತಮ್ಮದೇ ಆದ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸಿ ಅಮೆರಿಕದಲ್ಲಿ ನೆಲೆ ನಿಂತಿದ್ದಾರೆ. ಒಬ್ಬರು ಕಾರ್ಪೋರೆಟ್‌ ಜಗತ್ತಿನಲ್ಲಿ ಮತ್ತೊಬ್ಬರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಮೀಳಾ ಅವರು ಕಾಂಗ್ರೆಸ್‌ ಮಹಿಳಾ ಪ್ರತಿನಿಧಿಯಾದ ಮೊದಲ ಭಾರತೀಯ ಸಂಜಾತ ಅಮೆರಿಕನ್‌ ಮಹಿಳೆ.

‘ನಾನು ಮತ್ತು ನೀವು ಭಾರತದ ಒಂದೇ ರಾಜ್ಯದಲ್ಲಿ ಹುಟ್ಟಿದವರೆಂದು ತಿಳಿಸಲು ನನಗಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳುತ್ತೇನೆ. ನಾವು ಇಲ್ಲಿ ಕೆಲವರು ವಲಸಿಗರು ಇರುವಾಗ, ನೀವೊಬ್ಬರು ವಲಸಿಗನಾಗಿಯೇ ದೈತ್ಯ ಕಂಪನಿಯೊಂದನ್ನು ಮುನ್ನಡೆಸುತ್ತಿರುವುದನ್ನು ಮತ್ತು ಈ ದೇಶಕ್ಕೆ ವಲಸಿಗರು ನೀಡುತ್ತಿರುವ ಮಹತ್ವದ ಕೊಡುಗೆಯನ್ನು ತಿಳಿಸಲು ನಾನು ಉತ್ಸುಕಳಾಗಿದ್ದೇನೆ. ಪಿಚ್ಚೈ ಅವರೇ ನಿಮಗೆ ಧನ್ಯವಾದಗಳು’ ಎಂದು ಪ್ರಮೀಳಾ ಅವರು ಹೇಳಿರುವುದಾಗಿ ಪಿಚ್ಚೈ ತಿಳಿಸಿದ್ದಾರೆ.

46ರ ಹರೆಯದ ಸುಂದರ್ ಪಿಚ್ಚೈ ಅವರು ಚೆನ್ನೈನಲ್ಲಿ ಜನಿಸಿದವರು. ಖರಗ್‌ಪುರದ ಐಐಟಿಯ ಪದವೀಧರರು. 2004ರಲ್ಲಿ ಗೂಗಲ್‌ ಸಂಸ್ಥೆಗೆ ಸೇರಿದ ಅವರು 2005ರಿಂದ ಸಂಸ್ಥೆಯ ಸಿಇಒ ಆಗಿದ್ದಾರೆ. 

53ರ ಹರೆಯದ ಜಯಪಾಲ್‌ ಅವರು ಸಹ ಚೆನ್ನೈನಲ್ಲೇ ಜನಿಸಿದವರು. ವಿದ್ಯಾರ್ಥಿಯಾಗಿದ್ದಾಗಲೇ ಅಮೆರಿಕಕ್ಕೆ ಬಂದಿದ್ದಾರೆ. ಈ ಇಬ್ಬರೂ ಎಚ್‌1ಬಿ ವೀಸಾ ಅಡಿ ವಲಸೆ ಬಂದವರಾಗಿದ್ದು, ಗ್ರೀನ್‌ ಪಡೆದು ಅಮೆರಿಕದ ನಾಗರಿಕರಾಗಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆ ಸಂದರ್ಭ 2016ರಲ್ಲಿ ವಲಸೆಯ ಮೇಲೆ ಕಠಿಣ ನಿರ್ಬಂಧ ಹೇರುವುದಾಗಿ ಭರವಸೆ ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !