ಅಮೆರಿಕದ ಪ್ರತಿಷ್ಠಿತ ಕೋರ್ಟ್‌ಗೆ ನಿಯೋಮಿ ರಾವ್ ನೇಮಕ

7
ದೀಪಾವಳಿ ಕೊಡುಗೆ ನೀಡಿದ ಟ್ರಂಪ್

ಅಮೆರಿಕದ ಪ್ರತಿಷ್ಠಿತ ಕೋರ್ಟ್‌ಗೆ ನಿಯೋಮಿ ರಾವ್ ನೇಮಕ

Published:
Updated:
Deccan Herald

ವಾಷಿಂಗ್ಟನ್: ವಾಷಿಂಗ್ಟನ್‌ನ ಪ್ರಮುಖ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತೀಯ ಸಂಜಾತೆ ನಿಯೋಮಿ ರಾವ್ (45) ನೇಮಕಗೊಂಡಿದ್ದಾರೆ. ಅಮೆರಿಕದ ಸುಪ್ರೀಂಕೋರ್ಟ್‌ನ ನಂತರದ ಸ್ಥಾನದಲ್ಲಿ ಈ ಕೋರ್ಟ್ ಇದೆ. 

ಬ್ರೆಟ್ ಕ್ಯಾವನಾಗ್ ಅವರಿಂದ ತೆರವಾದ ಸ್ಥಾನಕ್ಕೆ ರಾವ್ ಅವರನ್ನು ನೇಮಿಸಿ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಬ್ರೆಟ್ ಅವರು ಇಲ್ಲಿ 12 ವರ್ಷ ಕೆಲಸ ಮಾಡಿದ ಬಳಿಕ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ನೇಮಕಗೊಂಡಿದ್ದಾರೆ. 

ಶ್ವೇತಭವನದಲ್ಲಿ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗಿದ್ದ ಟ್ರಂಪ್ ಅವರು ಮಂಗಳವಾರ ಈ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಘೋಷಣೆ ವೇಳೆ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ನವತೇಜ್ ಸಿಂಗ್ ಸರ್ನಾ ಇದ್ದರು. 

ಸೆನೆಟ್ ಇದಕ್ಕೆ ಅನುಮೋದನೆ ನೀಡಿದಲ್ಲಿ, ರಾವ್ ಅವರು ಈ ಹುದ್ದೆಗೆ ನೇಮಕವಾದ ಎರಡನೇ ಭಾರತೀಯ ಎನಿಸಲಿದ್ದಾರೆ. ಒಬಾಮಾ ಅವಧಿಯಲ್ಲಿ ಶ್ರೀ ಶ್ರೀನಿವಾಸನ್ ಅವರು ಈ ಪ್ರತಿಷ್ಠಿತ ಕೋರ್ಟ್‌ಗೆ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 

ನಿಯೋಮಿ ಅವರು ಸದ್ಯ ಮಾಹಿತಿ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿಯ (ಒಐಆರ್‌ಎ) ಆಡಳಿತಾಧಿಕಾರಿಯಾಗಿದ್ದಾರೆ. ಟ್ರಂಪ್ ಆಡಳಿತದ ನೀತಿಗಳು ಹಾಗೂ ಕಾರ್ಯಕಾರಿ ಅದೇಶಗಳ ಮೇಲೆ ಇವರು ನಿಗಾ ವಹಿಸುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !