ನ್ಯೂಯಾರ್ಕ್: ಟ್ರ್ಯಾಕ್ಟರ್ ಅಡಿ ಸಿಲುಕಿ ಭಾರತೀಯ ಸಾವು

7

ನ್ಯೂಯಾರ್ಕ್: ಟ್ರ್ಯಾಕ್ಟರ್ ಅಡಿ ಸಿಲುಕಿ ಭಾರತೀಯ ಸಾವು

Published:
Updated:

ನ್ಯೂಯಾರ್ಕ್ (ಪಿಟಿಐ): ಭಾರತೀಯ ಅಮೆರಿಕನ್ ನೀಲ್ ಪಟೇಲ್‌ (30) ಎನ್ನುವವರು ನಿಂತಿರುವ ಟ್ರ್ಯಾಕ್ಟರ್ ಅಡಿಯಲ್ಲಿ ನುಸುಳಿಕೊಂಡು ಸಾಗುವ ವೇಳೆ, ಇದ್ದಕ್ಕಿದ್ದಂತೆ ಟ್ರ್ಯಾಕ್ಟರ್ ಚಾಲನೆಗೊಂಡಿದ್ದರಿಂದ ಚಕ್ರದ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. 

ವುಡಿಂಗ್ ಅವೆನ್ಯು ಮಾರ್ಗ 1ರ ರೇಸ್‌ವೇ ನಿಲ್ದಾಣದ ಬಳಿ, ದೂರದ ದಾರಿ ಕ್ರಮಿಸುವುದನ್ನು ತಪ್ಪಿಸುವ ಸಲುವಾಗಿ ನೀಲ್ ಅವರು ಈ ಟ್ರ್ಯಾಕ್ಟರ್ ಅಡಿ ನುಸುಳಿಕೊಂಡು ಸಾಗುತ್ತಿದ್ದರು. ಆದರೆ ಇದರ ಅರಿವಿಲ್ಲದ ಚಾಲಕ ವಾಹನ ಚಲಾಯಿಸಿದ್ದರಿಂದ, ಹಿಂಭಾಗದ ಚಕ್ರಕ್ಕೆ ಸಿಲುಕಿದ ನೀಲ್ ಸುಮಾರು 10 ಅಡಿವರೆಗೂ ಸಾಗಿದ್ದರು.

‘ಫೆ.5ರಂದು ಈ ಘಟನೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ.9ರಂದು ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !