7

ಭಾರತದ ಬಾಲಕನಿಗೆ ಗೌರವ

Published:
Updated:

ದುಬೈ: ಮಾಲಿನ್ಯ ನಿಯಂತ್ರಣದ ಜತೆಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ದಿನಸಿ ಅಂಗಡಿಗಳಿಗೆ ಪ್ಲಾಸ್ಟಿಕ್‌ ಮುಕ್ತ ಚೀಲಗಳನ್ನು ವಿತರಿಸಿದ ಹತ್ತು ವರ್ಷದ ಭಾರತ ಮೂಲದ ಬಾಲಕನನ್ನು ದುಬೈನಲ್ಲಿ ಗೌರವಿಸಲಾಗಿದೆ.

ಈ ಸಾಧನೆ ಮಾಡಿದ ಫೈಯಾಜ್‌ ಮಹಮ್ಮದ್‌ಗೆ ದುಬೈ ಪುರಸಭೆ ‘ಸುಸ್ಥಿರ ರಾಯಭಾರಿ’ ಎಂಬ ಬಿರುದು ನೀಡಿದೆ. 

ಈದ್‌ ದಿನದಂದು ದೊರೆತ ₹2,805 ಹಣದಲ್ಲಿ ಈ ಬಾಲಕ 130 ಚೀಲಗಳನ್ನು ಖರೀದಿಸಿ, ಅದರ ಮೇಲೆ ಚಿತ್ರಗಳನ್ನು ಬಿಡಿಸಿ ಮನೆಯ ಸಮೀಪದ ಕಿರಾಣಿ ಅಂಗಡಿಗೆ ನೀಡಿದ್ದಾನೆ. 

ಅಂಗಡಿಯವರು ಒಂದು ತಿಂಗಳಿಗೆ ಸುಮಾರು 1,200 ಪ್ಲಾಸ್ಟಿಕ್‌ ಚೀಲ ಬಳಸುತ್ತಾರೆ. ಇದನ್ನು ನಿಯಂತ್ರಿಸಲು ಈ ಕಾರ್ಯ ಕೈಗೊಂಡಿರುವುದಾಗಿ ಫೈಯಾಜ್‌ ತಿಳಿಸಿದ್ದಾನೆ.  

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !