ಪಾಕ್: ನೀರಿನ ದಾಹ ತಣಿಸಿದ ಭಾರತೀಯ ಉದ್ಯಮಿ

ಶುಕ್ರವಾರ, ಜೂನ್ 21, 2019
24 °C

ಪಾಕ್: ನೀರಿನ ದಾಹ ತಣಿಸಿದ ಭಾರತೀಯ ಉದ್ಯಮಿ

Published:
Updated:
ಚಿತ್ರ: ಟ್ವಿಟರ್‌ (@qamarkhan88)

ದುಬೈ: ಭಾರತೀಯ ಮೂಲದ ದುಬೈ ಉದ್ಯಮಿಯೊಬ್ಬರು ಪಾಕಿಸ್ತಾನದ ಥಾರಪಾರ್ಕರ್‌ ಜಿಲ್ಲೆಯಲ್ಲಿ 60 ಹ್ಯಾಂಡ್‌ಪಂಪ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಅಲ್ಲಿಯ ಜನರ ನೀರಿನ ದಾಹ ತಣಿಸಿದ್ದಾರೆ. 

ಜೋಗಿಂಧರ್‌ ಸಿಂಗ್‌ ಸಲಾರಿಯಾ, ಬಡತನ ರೇಖೆಗಿಂತ ಕೆಳಗಿರುವ ಇಲ್ಲಿಯ ಜನರಿಗೆ ನೆರವಾಗಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯ ಬರ ಪರಿಸ್ಥಿತಿಯನ್ನು ಅರಿತ ಜೋಗಿಂಧರ್‌, ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ  ನೀರಿನ ವ್ಯವಸ್ಥೆಯ ಜತೆಗೆ ದವಸ ಧಾನ್ಯಗಳನ್ನು ಕಳುಹಿಸುವ ಮೂಲಕ ಇಲ್ಲಿಯ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.  

ಸಾರಿಗೆ ಉದ್ಯಮ ನಡೆಸುತ್ತಿರುವ ಇವರು, ಪೆಹಲ ಚಾರಿಟೆಬಲ್‌ ಟ್ರಸ್ಟ್‌ ಮೂಲಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. 1993ರಿಂದ ದುಬೈನಲ್ಲಿ ನೆಲೆಸಿದ್ದಾರೆ.  

‘ಪುಲ್ವಾಮಾ ದಾಳಿಯ ದಾಳಿಯ ನಂತರ ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಗ್ರಾಮಗಳಿಗೆ ನೆರವು ನೀಡುವುದು ಅಗತ್ಯ’ ಎಂದು ಜೋಗಿಂಧರ್‌ ಅಭಿಪ್ರಾಯಪಟ್ಟಿದ್ದಾರೆ. 

ಸಾಮಾಜಿಕ ಕಾರ್ಯಕರ್ತ ಭೀಲ್‌ ಖಂಗರ್‌ ಈ ಯೋಜನೆಯ ಸಾಕಾರಕ್ಕೆ ನೆರವಾಗಿದ್ದಾರೆ.  ಈ ಗ್ರಾಮಗಳಲ್ಲಿ ರಸ್ತೆಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಆಸ್ಪತ್ರೆಯೂ 50 ಕಿ.ಮೀ. ದೂರದಲ್ಲಿದೆ. ಮುಖ್ಯರಸ್ತೆಗೆ ಬರಲು ಜನರು 25 ಕಿ.ಮೀ. ಕ್ರಮಿಸಬೇಕು. ಶಿಕ್ಷಣ ವ್ಯವಸ್ಥೆಯೂ ಗುಣಮಟ್ಟದಿಂದ ಕೂಡಿಲ್ಲ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !