ಬಾಂಗ್ಲಾ ಸಚಿವಗೆ ದೇವಿಶೆಟ್ಟಿ ಚಿಕಿತ್ಸೆ

ಮಂಗಳವಾರ, ಮಾರ್ಚ್ 26, 2019
31 °C

ಬಾಂಗ್ಲಾ ಸಚಿವಗೆ ದೇವಿಶೆಟ್ಟಿ ಚಿಕಿತ್ಸೆ

Published:
Updated:

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ‌ಹೃದಯ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಸಂಪುಟದ ಹಿರಿಯ ಸಚಿವರೊಬ್ಬರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಭಾರತದ ಖ್ಯಾತ ಹೃದಯ ತಜ್ಞ ಡಾ.ದೇವಿಶೆಟ್ಟಿ ಅವರ ನೆರವು ಕೋರಿದ್ದಾರೆ.

ಬೆಂಗಳೂರಿನ ವೈದ್ಯ ದೇವಿಶೆಟ್ಟಿ ಅವರಿಗೆ ಭಾನುವಾರ ಸಂಜೆ ಹಸೀನಾ ಅವರು ಕರೆ ಮಾಡಿದ್ದು, ರಸ್ತೆ, ಸೇತುವೆ ಹಾಗೂ ಸಾರಿಗೆ ಸಚಿವ ಒಬೈದುಲ್‌ ಖಾದರ್‌ ಅವರಿಗೆ ಚಿಕಿತ್ಸೆ ನೀಡಲು ಬಾಂಗ್ಲಾದೇಶಕ್ಕೆ ಬರುವಂತೆಯೂ ಮನವಿ ಮಾಡಿದ್ದರು.

ದೇವಿಶೆಟ್ಟಿ ಅವರು ಸೋಮವಾರ ಮಧ್ಯಾಹ್ನವೇ ಢಾಕಾದ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಖಾದರ್‌ ಅವರನ್ನು ದಾಖಲಿಸಿರುವ ಬಂಗಬಂಧು ಶೇಖ್‌ ಮುಜಿಬ್‌ ಮೆಡಿಕಲ್‌ ಯೂನಿವರ್ಸಿಟಿಗೆ (ಬಿಎಸ್‌ಎಂಎಂಯು) ನೇರವಾಗಿ ತಲುಪಿದರು. 

ಆಡಳಿತರೂಢ ಅವಾಮಿ ಪಕ್ಷದ ಪ್ರಧಾನಕಾರ್ಯದರ್ಶಿಯೂ ಆದ ಖಾದರ್‌ ಹೃದಯ ನಾಳದಲ್ಲಿ ಮೂರು ಕಡೆ ರಕ್ತ ಹೆಪ್ಪುಗಟ್ಟಿರುವುದು ತಪಾಸಣೆಯಲ್ಲಿ ಕಂಡುಬಂದಿದೆ. ಅಲ್ಲದೆ, ಅನಿಯಂತ್ರಿತ ಮಧುಮೇಹ ಮತ್ತು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ತೀವ್ರ ಆರೈಕೆಯ ಘಟಕಕ್ಕೆ ಮೊದಲು ದಾಖಲಿಸಿ, ನಂತರದಲ್ಲಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ಅವರ ಆರೋಗ್ಯ ಕ್ಷೀಣಗೊಂಡಿದೆ ಎಂದು ಡೈಲಿ ಸ್ಟಾರ್ ತಿಳಿಸಿದೆ.

‘ಬಾಂಗ್ಲಾದೇಶದ ಪ್ರಧಾನಿ ಹಸೀನಾ ಅವರು ಹಿಂದಿನ ದಿನ ಸಂಜೆ ನನಗೆ ಕರೆ ಮಾಡಿದ್ದು, ಅವರ ಸಂಪುಟದ ಸಚಿವರೊಬ್ಬರಿಗೆ ಚಿಕಿತ್ಸೆ ನೀಡುವಂತೆ ಕೋರಿಕೊಂಡಿದ್ದರು. ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಹಸೀನಾ ಅವರ ಗಮನಕ್ಕೂ ತಂದಿದ್ದೇನೆ’ ಎಂದು ದೇವಿಶೆಟ್ಟಿ ಪಿಟಿಐ ಸುದ್ದಿ ಸಂಸ್ಥೆಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.

‘ಖಾದರ್ ಅವರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಅಗತ್ಯವಿದ್ದು, ಅವರನ್ನು ಸಿಂಗಪುರಕ್ಕೆ ಕರೆದೊಯ್ಯುವುದು ಸೂಕ್ತ. ಈ ಬಗ್ಗೆ ಬಿಎಸ್‌ಎಂಎಂಯುನ ವೈದ್ಯರಿಗೂ ಸಲಹೆ ನೀಡಿದ್ದೇನೆ’ ಎಂದು ಶೆಟ್ಟಿ ತಿಳಿಸಿದ್ದಾರೆ.

ತುರ್ತಾಗಿ ಸಿಂಗಪುರದ ಆಸ್ಪತ್ರೆಗೆ ಕರೊದೊಯ್ಯಲು ಬಾಂಗ್ಲಾದೇಶದ ಸರ್ಕಾರ ನಿರ್ಧರಿಸಿದೆ ಎಂದು ಬಿಡಿನ್ಯೂಸ್‌ 24 ಡಾಟ್‌ಕಾಮ್‌ ವರದಿ ಮಾಡಿದೆ. 

 

Indian cardic surgeon examines Bangladesh minister in Dhaka after special request from PM Hasina

 

Dhaka, Mar 4 (PTI) Bangladesh Prime Minister Sheikh Hasina has sought the help of a leading Indian cardiac surgeon in determining the treatment of her ailing senior Cabinet colleague.

Hasina called the Bengaluru-based Dr Devi Shetty on Sunday evening and requested him to come to Dhaka to examine the health condition of Bangladesh minister for Road, Transport and Bridge, Obaidul Quader.

 

Quader, who is also the General Secretary of ruling Awami League, was on Sunday admitted to the Dhaka's Bangabandhu Sheikh Mujib Medical University (BSMMU) after being diagnosed with three blockages in his coronary artery.

He was taken to the Intensive Care Unit at first and then moved to Critical Care Unit as his condition deteriorated, the Daily Star reported.

He had also uncontrolled diabetes and electrolyte imbalance.

President Abdul Hamid, Prime Minister Hasina and Speaker Shirin Sharmin Chaudhury and many Cabinet members and lawmakers visited him at the hospital, the paper said.

Shetty, who is the chairman of Narayana group of hospitals, arrived at the Dhaka airport on Monday afternoon from where he directly went to the BSMMU, where Quader was on life support.

 "I received call from the Bangladesh Prime Minister last evening and was requested to examine the health of the minister. I was told that the condition of the minister was serious," Shetty told PTI over the phone.

He examined the Awami League leader and spoke with the other doctors.

Shetty said that the minister will get a better treatment in Singapore.

"I examined Quader's health closely and have asked BSMMU doctors to shift him to Singapore where he will get better medical facility," Shetty.

The decision to transfer him to Singapore was made shortly afterwards, the bdnews24.com reported. PTI RUP AKJ

RUP RUP

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !