ಭಾರತದ ಪದವಿಗೆ ಯುಎಇನಲ್ಲಿ ಸಮಾನಸ್ಥಾನಮಾನ

ಭಾನುವಾರ, ಏಪ್ರಿಲ್ 21, 2019
26 °C

ಭಾರತದ ಪದವಿಗೆ ಯುಎಇನಲ್ಲಿ ಸಮಾನಸ್ಥಾನಮಾನ

Published:
Updated:

ದುಬೈ: ಭಾರತದಲ್ಲಿ ಪಡೆದ ಪದವಿಗಳಿಗೆ ಯುಎಇನಲ್ಲೂ ಇನ್ನು ಮುಂದೆ ಸಮಾನ ಸ್ಥಾನಮಾನ ಸಿಗಲಿದೆ. ಈ ಸಂಬಂಧ ಯುಇಎ ಸರ್ಕಾರ ಘೋಷಣೆಯೊಂದನ್ನು ಹೊರಡಿಸಲಿದೆ. ಈ ಕ್ರಮದಿಂದಾಗಿ ಕೊಲ್ಲಿ ದೇಶದಲ್ಲಿ ಉದ್ಯೋಗಪಡೆಯುವವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. 

ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಅವರು ಕಳೆದ ವಾರ ಯುಎಇ ಶಿಕ್ಷಣ ಸಚಿವ ಹುಸೇನ್‌ ಬಿನ್‌ ಇಬ್ರಾಹಿಂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಆಂತರಿಕ ಮತ್ತು ಬಾಹ್ಯ ಅಂಕಗಳ ಸಂಬಂಧ ಸ್ಪಷ್ಟತೆ ಇಲ್ಲದೆ ಭಾರತದಲ್ಲಿ ಪಡೆದ ಪದವಿ ಯನ್ನು ಯುಎಇನಲ್ಲಿ ತಿರಸ್ಕರಿಸಲಾಗುತಿತ್ತು. ಈ ಬಗ್ಗೆ ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.  

ಅಂಕದ ಕಾರಣದಿಂದ ಈಗಾಗಲೇ ಯಾರ ಅರ್ಜಿಗಳನ್ನು ತಿರಸ್ಕರಿಸಲಾಗಿದೆಯೊ ಅವುಗಳನ್ನೂ ಪರಿಶೀಲಿಸಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !