ಶುಕ್ರವಾರ, ಆಗಸ್ಟ್ 23, 2019
21 °C

ಅಮೆರಿಕದಲ್ಲಿ ಭಾರತೀಯ ರಾಯಭಾರ ಅಧಿಕಾರಿಗಳಿಂದ ಹಿಂದಿ ತರಬೇತಿ

Published:
Updated:

ವಾಷಿಂಗ್ಟನ್‌: ಪ್ರತಿಷ್ಠಿತ ಜಾರ್ಜ್‌ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಚಿತ ಹಿಂದಿ ಭಾಷಾ ತರಬೇತಿ ನೀಡಲು ಭಾರತೀಯ ರಾಯಭಾರ ಕಚೇರಿ ನಿರ್ಧರಿಸಿದೆ. 

ಅಮೆರಿಕದಲ್ಲಿ ಹಿಂದಿ ಭಾಷೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಆಗಸ್ಟ್‌ 28ರಿಂದ ಆರು ವಾರಗಳ ಹಿಂದಿ ಭಾಷಾ ಪರಿಚಯ ತರಬೇತಿಯನ್ನು ರಾಯಭಾರ ಕಚೇರಿಯಲ್ಲಿನ ಭಾರತೀಯ ಸಂಸ್ಕೃತಿಯ ಶಿಕ್ಷಕ ಡಾ.ಮೋಕ್ಸ್‌ರಾಜ್ ನೀಡಲಿದ್ದಾರೆ.  

ಈ ವರ್ಷದ ಆರಂಭದಲ್ಲಿ, ರಾಯಭಾರ ಕಚೇರಿಯ ಆವರಣದಲ್ಲಿ ಒಂದು ಗಂಟೆ ಉಚಿತ ತರಗತಿ ನಡೆಸಲಾಗಿತ್ತು. ಇದರಿಂದ ಆಕರ್ಷಿತರಾಗಿ, ಏಳು ದೇಶಗಳ 87 ಅಭ್ಯರ್ಥಿಗಳು ಹಿಂದಿ ಕಲಿಕೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ‌

ಪರಿಚಯಾತ್ಮಕ ಹಿಂದಿ ಭಾಷಾ ಕೋರ್ಸ್‌ನಲ್ಲಿ, ವಿದ್ಯಾರ್ಥಿಗಳಿಗೆ ಹಿಂದಿ ವರ್ಣಮಾಲೆ, ಮಾತನಾಡುವುದು ಮತ್ತು ಭಾಷೆಯ ವಿವಿಧ ಮೂಲಭೂತ ಅಂಶಗಳನ್ನು ಪರಿಚಯಿಸಲಾಗುವುದು. 

‘ಒಂದು ಗಂಟೆಯ ಹಿಂದಿ ಭಾಷಾ ತರಗತಿಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಇದು ಹಿಂದಿ ಭಾಷಾ ಪರಿಚಯಾತ್ಮಕ ಕೋರ್ಸ್‌ ಪ್ರಾರಂಭಿಸಲು ಕಾರಣವಾಯಿತು’ ಎಂದು ಸಿಗುರ್ ಸೆಂಟರ್ ಫಾರ್ ಏಷ್ಯನ್ ಸ್ಟಡೀಸ್ ನಿರ್ದೇಶಕ ಬೆಂಜಮಿನ್ ಡಿ. ಹಾಪ್ಕಿನ್ಸ್ ತಿಳಿಸಿದರು.

Post Comments (+)