ಆಸ್ಟ್ರೇಲಿಯಾದಲ್ಲಿ ಭಾರತೀಯ ದಂತ ವೈದ್ಯೆ ಕೊಲೆ

ಶನಿವಾರ, ಮಾರ್ಚ್ 23, 2019
24 °C

ಆಸ್ಟ್ರೇಲಿಯಾದಲ್ಲಿ ಭಾರತೀಯ ದಂತ ವೈದ್ಯೆ ಕೊಲೆ

Published:
Updated:

ಮೆಲ್ಬೊರ್ನ್‌ (ಪಿಟಿಐ): ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಭಾರತದ ದಂತ ವೈದ್ಯೆ ಪ್ರೀತಿ ರೆಡ್ಡಿ (32) ತನ್ನ ಕಾರಿನಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.

ಪ್ರೀತಿ ರೆಡ್ಡಿಯ ದೇಹದ ಮೇಲೆ ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ಪೂರ್ವ ಸಿಡ್ನಿಯ ರಸ್ತೆ ಬದಿ ನಿಲ್ಲಿಸಿದ್ದ ಅವರ ಕಾರಿನಲ್ಲಿ ಇಟ್ಟಿರುವುದು ಕಂಡುಬಂದಿದೆ ಎಂದು ನ್ಯೂ ಸೌತ್‌ ವೇಲ್ಸ್‌ ಪೊಲೀಸರು ಬುಧವಾರ ತಿಳಿಸಿದ್ದಾರೆ.

ದಂತ ವೈದ್ಯೆ ನಾಪತ್ತೆಯಾದ ಮರು ದಿನ ನಡೆದಿದ್ದ ಅಪಘಾತವೊಂದರಲ್ಲಿ ಮೃತಪಟ್ಟ ಭಾರತದ ಹರ್ಷ ನರ್ಡೆ ಎಂಬಾತನೇ ಅವರನ್ನು ಕೊಂದಿರಬಹುದು. ಈತ ದಂತ ವೈದ್ಯೆಯ ಮಾಜಿ ಪ್ರಿಯಕರನಾಗಿದ್ದು, ಈ ಕೊಲೆ ಪ್ರಕರಣ ಬೆಳಕಿಗೆ ಬರುವ ಮೊದಲು ವೈದ್ಯೆಯ ನಾಪತ್ತೆ ಸಂಬಂಧ ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ರೆಡ್ಡಿಯವರ ಶವ ಪತ್ತೆಯಾದ ಸ್ಥಳದಿಂದ ಸುಮಾರು 340 ಕಿ.ಮೀ. ದೂರದ ನ್ಯೂ ಇಂಗ್ಲಂಡ್‌ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಹರ್ಷ ನರ್ಡೆ ಇದ್ದ ಕಾರು ಭೀಕರ ಅಪಘಾತಕ್ಕೀಡಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಂತ ವೈದ್ಯೆಯ ನಾಪತ್ತೆ ಪ್ರಕರಣ ದಾಖಲಾದ ಮರು ದಿನವೇ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಡ್ಡಿ ಕೊನೆಯ ಬಾರಿ ಮಾರ್ಚ್ 3ರಂದು ಜಾರ್ಜ್‌ ಸ್ಟ್ರೀಟ್‌ನ ಮೆಕ್ ಡೊನಾಲ್ಡ್ ಬಳಿ ಕಾಣಿಸಿಕೊಂಡಿದ್ದರು. ಅವರು ಅಲ್ಲಿಂದ ಎರಡು ಬಾಟಲಿ ನೀರು ಖರೀದಿಸಿದ್ದಾರೆ. ಆ ದಿನ ರಾತ್ರಿ ಹೋಟೆಲ್‌ನಲ್ಲಿ ಅವರಿಗೆ ಗೊತ್ತಿರುವ ವ್ಯಕ್ತಿ ಜತೆಗೆ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೇಂಟ್ ಲಿಯೊನಾರ್ಡ್ಸ್ ನಲ್ಲಿ ವಾರಾಂತ್ಯದಲ್ಲಿ ನಡೆದ ದಂತವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರೀತಿ ರೆಡ್ಡಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕುಟುಂಬದ ಸದಸ್ಯರೊಂದಿಗೆ ಕೊನೆ ಬಾರಿ ಮಾತನಾಡಿದ್ದರು. ತಿಂಡಿ ತಿಂದ ನಂತರ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ ಅವರು ಮನೆಗೆ ಮರಳಿ ಬರದಿದ್ದಾಗ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !