ಭಾರತೀಯ ಕೈದಿ ಬಿಡುಗಡೆ

7

ಭಾರತೀಯ ಕೈದಿ ಬಿಡುಗಡೆ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇಲೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಮೀದ್‌ ನಿಹಾಲ್‌ ಅನ್ಸಾರಿಯನ್ನು ಪಾಕಿಸ್ತಾನ ಸೋಮವಾರ ಬಿಡುಗಡೆ ಮಾಡಿದೆ.

ನಕಲಿ ಗುರುತಿನ ಚೀಟಿ ಹೊಂದಿದ್ದ ಮುಂಬೈ ನಿವಾಸಿ ಹಮೀದ್‌ ಅನ್ಸಾರಿ (33) ಅವರನ್ನು 2012ರಲ್ಲಿ ಬಂಧಿಸಲಾಗಿತ್ತು. 2015ರ ಡಿಸೆಂಬರ್‌ 15ರಂದು ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು.

ಡಿಸೆಂಬರ್‌ 15ರಂದು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ, ಬಿಡುಗಡೆಗೆ ಪೂರಕ ದಾಖಲೆಗಳು ಸಿದ್ಧವಾಗದ ಕಾರಣ ಅವರು ಭಾರತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಹಮೀದ್‌ ಬಿಡುಗಡೆ ಮತ್ತು ಭಾರತಕ್ಕೆ ವಾಪಸ್‌ ಕಳುಹಿಸಲು ಪೂರಕವಾದ ಎಲ್ಲ ಪ್ರಕ್ರಿಯೆಗಳನ್ನೂ ಒಂದು ತಿಂಗಳೊಳಗೆ ಪೂರೈಸುವಂತೆ ಪೇಶಾವರ ಹೈಕೋರ್ಟ್‌ ಕಳೆದ ಗುರುವಾರ ಸರ್ಕಾರಕ್ಕೆ ಗಡುವು ನೀಡಿತ್ತು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !