ಸೋಮವಾರ, ಸೆಪ್ಟೆಂಬರ್ 16, 2019
24 °C

ಸಾರ್ವಜನಿಕ ಸಾರಿಗೆ ಬಳಕೆ ಭಾರತೀಯರಲ್ಲೂ ನಿರಾಸಕ್ತಿ

Published:
Updated:

ಮೆಲ್ಬರ್ನ್‌: ಭಾರತ, ಚೀನಾ ಮತ್ತು ಏಷ್ಯಾದ ಕೆಲ ದೇಶಗಳ ನಗರವಾಸಿಗಳು ಸಾರ್ವಜನಿಕ ಸಾರಿಗೆ ಬಳಸಲು ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ಸಂಶೋಧಕರು ಭಾರತ, ಚೀನಾ, ಅಮೆರಿಕ, ನೆದರ್‌ ಲ್ಯಾಂಡ್‌, ಆಸ್ಟ್ರೇಲಿಯಾ ಸೇರಿದಂತೆ ಕೆಲ ದೇಶಗಳ ಪ್ರಯಾಣಿಕರನ್ನು ಸಂದರ್ಶಿಸಿ ಈ ಅಧ್ಯಯನ ನಡೆಸಿದ್ದಾರೆ.

ನಗರದ ಜನರ ಈ ತಾತ್ಸಾರದ ಮನೋಭಾವವನ್ನು ಬದಲಿಸುವ ನಿಟ್ಟಿನಲ್ಲಿ ನಗರ ಯೋಜನೆ ರೂಪಿಸು ವವರು ಕಾರ್ಯೋನ್ಮುಖರಾಗಬೇಕು ಎಂದು ಈ ಅಧ್ಯಯನ ಆಗ್ರಹಿಸಿದೆ. 

ಈ ಅಧ್ಯಯನದ ವರದಿಯು ‘ಜರ್ನಲ್‌ ಆಫ್‌ ಟ್ರಾನ್ಸ್‌ಪೋರ್ಟ್‌ ಜಿಯಾಗ್ರಫಿ’ಯಲ್ಲಿ ಪ್ರಕಟವಾಗಿದ್ದು, ‘ಭಾರತ ಮತ್ತು ಚೀನಾದ ಜನರು ಈ ನಿಟ್ಟಿನಲ್ಲಿ ನಕಾರಾತ್ಮಕ ಮನೋಭಾವ’ ಹೊಂದಿದ್ದಾರೆ ಎಂದು ಪ್ರತಿಪಾದಿಸಿದೆ.

‘ಆಂಗ್ಲೊ ಮತ್ತು ನಾರ್ಡಿಕ್‌ ದೇಶ ಗಳಲ್ಲಿನ ಬಹುತೇಕರು ಶ್ರೀಮಂತರಾಗಿದ್ದು, ಹೆಚ್ಚು ಕಾರು ಹೊಂದುವುದನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ’ ’ ಎಂದು ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ಸಂಶೋಧಕಿ ಡೊರಿನಾ ಪೊಜಾನಿ ತಿಳಿಸಿದ್ದಾರೆ.

Post Comments (+)