ಗುರುವಾರ , ಡಿಸೆಂಬರ್ 12, 2019
26 °C
ಗುಂಡ್ಲುಪೇಟೆಯ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಆರಂಭ

ಬಡವರಿಗೆ ನೆರವಾದ ಇಂದಿರಾ ಕ್ಯಾಂಟೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಗುಂಡ್ಲುಪೇಟೆ: ತಾಲ್ಲೂಕಿನ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಇಂದಿರಾ ಕ್ಯಾಂಟೀನಿನಲ್ಲಿ ದಿನದ ಮೂರು ಹೊತ್ತು ಗುಣಮಟ್ಟದ ಆಹಾರ ದೊರಕಲಿದೆ.

ಡಿ.7ರಿಂದ ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ನಿರ್ಮಾಣವಾಗಿರುವ ಕ್ಯಾಂಟೀನಿನಲ್ಲಿ ಗುಣಮಟ್ಟದ ಆಹಾರವನ್ನು ಸವಿಯಬಹುದು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಲಾ 300 ಜನರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಬೆಳಗಿನ ತಿಂಡಿಗೆ ₹ 5, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹ 10 ನೀಡಬೇಕು. ಉಳಿದಂತೆ ಒಬ್ಬರಿಗೆ ಸರ್ಕಾರದಿಂದ ₹ 33.80 ನೀಡಲಾಗುತ್ತದೆ. ಒಂದು ತಿಂಗಳಿಗೆ ₹ 5.10 ಲಕ್ಷ ನಗರಾಭಿವೃದ್ಧಿ ಇಲಾಖೆಯಿಂದ ನೀಡಲಾಗುತ್ತದೆ.

ಕ್ಯಾಂಟೀನ್ ನಿರ್ಮಾಣಕ್ಕೆ ₹ 76.40 ಲಕ್ಷ ವ್ಯಯಿಸಲಾಗಿದೆ. ಅಡುಗೆ ಕೋಣೆ, ಕ್ಯಾಂಟೀನ್, ಹೊರ ಆವರಣ ಮತ್ತು ಉಪಕರಣ ಸೇರಿದೆ. ಗುಣಮಟ್ಟದ ಶುದ್ಧ ಮತ್ತು ರುಚಿಯಾದ ಆಹಾರವನ್ನು ನೀಡಲು ಟೆಂಡರ್‍ದಾರರಿಗೆ ಸೂಚಿಸಲಾಗಿದೆ ಎಂದು ಪುರಸಭೆ ಆಡಳಿತಾಧಿಕಾರಿ ರಮೇಶ್ ತಿಳಿಸಿದರು.

ಕ್ಯಾಂಟೀನ್ ಗುತ್ತಿಗೆಯನ್ನು ದೆಹಲಿ ಮೂಲದ ಬಿಎಂಕೆಪಿ (ಭಾರತೀಯ ಮಾನವ ಕರ್ನಾಟಕ ಪರಿಷತ್) ವಹಿಸಿಕೊಂಡಿದ್ದು, ಇದು ಮಾಜಿ ಸೈನಿಕರ ಸಹಾಕರ ಸಂಘವಾಗಿದೆ.  ‌

ಬೆಳಗಿನ ತಿಂಡಿಗೆ ಇಡ್ಲಿ, ಖಾರಾಭಾತ್, ಪುಳಿಯೊಗರೆ, ಪೊಂಗಲ್, ರವಾ ಇಡ್ಲಿ, ಚಿತ್ರಾನ್ನ, ವಾಂಗಿಭಾತ್ ಮತ್ತು ಕೆಸರಿಭಾತ್. ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕೆ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ, ಬಿಸಿಬೆಳೆ ಭಾತ್/ ಮೊಸರನ್ನ, ಮೆಂತ್ಯೆ ಪಲಾವ್ ಮತ್ತು ಮೊಸರನ್ನ, ಪುಳಿಯೊಗರೆ ಮತ್ತು ಮೊಸರನ್ನ ಪುಲಾವ್ ಮತ್ತು ಮೊಸರನ್ನವನ್ನು ವಾರದ 7 ದಿನಗಳು ಒಂದೊಂದು ಬಗೆಯಲ್ಲಿ ನೀಡಲಾಗುತ್ತದೆ.

*
ಕ್ಯಾಂಟೀನಿಗೆ ನಿತ್ಯ ಭೇಟಿ ನೀಡಿ ಶುಚಿತ್ವ ಮತ್ತು ಗುಣಮಟ್ಟವನ್ನು ಪರಿಶೀಲನೆ ಮಾಡಲಾಗುತ್ತದೆ.
–ಪಿ.ಗಿರೀಶ್, ಅಧ್ಯಕ್ಷ, ಪುರಸಭೆ

ಪ್ರತಿಕ್ರಿಯಿಸಿ (+)