ಇಂದಿರಾನಗರದ ಪಬ್‌ನಲ್ಲಿ ಗಲಾಟೆ; ದೂರು–ಪ್ರತಿದೂರು

ಬುಧವಾರ, ಜೂನ್ 19, 2019
23 °C

ಇಂದಿರಾನಗರದ ಪಬ್‌ನಲ್ಲಿ ಗಲಾಟೆ; ದೂರು–ಪ್ರತಿದೂರು

Published:
Updated:

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ‘ಬಾಬ್ಸ್‌’ ಪಬ್‌ನಲ್ಲಿ ಶುಕ್ರವಾರ ರಾತ್ರಿ ಗಲಾಟೆ ನಡೆದಿದ್ದು, ಆ ಸಂಬಂಧ ದೂರು– ಪ್ರತಿದೂರು ದಾಖಲಾಗಿದೆ.

‘ಪ್ಲಾಸ್ಟಿಕ್ ಲೋಟ ಕೇಳಿದ್ದಕ್ಕಾಗಿ ಪಬ್‌ನ ವ್ಯವಸ್ಥಾಪಕ ಹಾಗೂ ಬೌನ್ಸರ್‌ಗಳು, ನನ್ನ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ 27 ವರ್ಷದ ಯುವತಿ ದೂರು ನೀಡಿದ್ದಾರೆ.

‘ಮೇ 30ರಂದು ರಾತ್ರಿ ನಾನು ಹಾಗೂ ಸ್ನೇಹಿತ, ಪಬ್‌ಗೆ ಹೋಗಿದ್ದೆವು. ತಡರಾತ್ರಿ ₹ 5 ಸಾವಿರ ಬಿಲ್ ಪಾವತಿಸಿ ಹೊರಗೆ ಬರುತ್ತಿದ್ದೆವು. ಅದೇ ವೇಳೆ ಪ್ಲಾಸ್ಟಿಕ್ ಲೋಟವನ್ನು ನೀಡುವಂತೆ ಕೋರಿದ್ದೆವು. ಅಷ್ಟಕ್ಕೆ ಕೋಪಗೊಂಡ ವ್ಯವಸ್ಥಾಪಕ ಹಾಗೂ ಬೌನ್ಸರ್‌ಗಳು, ಹಲ್ಲೆ ಮಾಡಿ ನಮ್ಮಿಬ್ಬರನ್ನು ರಸ್ತೆಗೆ ತಳ್ಳಿದ್ದಾರೆ’ ಎಂದು ದೂರಿದ್ದಾರೆ.

ಪ್ರತಿದೂರು ನೀಡಿರುವ ಪಬ್‌ನ ಜಗದೀಶ್‌, ‘ಯುವತಿ ಹಾಗೂ ಅವರ ಸ್ನೇಹಿತರು, ಮದ್ಯ ಸೇವಿಸಿ ಊಟ ಮಾಡಿ ಪಬ್‌ನಿಂದ ಹೊರಡುತ್ತಿದ್ದರು. ಮದ್ಯವನ್ನು ಪಾರ್ಸೆಲ್ ಮಾಡಿ ಅದರ ಜೊತೆ ಪ್ಲಾಸ್ಟಿಕ್ ಲೋಟ ಕೊಡುವಂತೆ ಕೇಳಿದ್ದರು. ಅದನ್ನು ಕೊಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇಂದಿರಾನಗರ ಪೊಲೀಸರು, ‘ಎರಡೂ ಕಡೆಯಿಂದ ದೂರು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !