ಸಿವಿಲ್‌ ಸರ್ವಿಸ್‌ ಪರೀಕ್ಷಾ ತಯಾರಿಗೆ ಇಂಟಿಗ್ರೇಟೆಡ್‌ ಕೋರ್ಸ್‌!

7

ಸಿವಿಲ್‌ ಸರ್ವಿಸ್‌ ಪರೀಕ್ಷಾ ತಯಾರಿಗೆ ಇಂಟಿಗ್ರೇಟೆಡ್‌ ಕೋರ್ಸ್‌!

Published:
Updated:
ಉಪೇಂದ್ರ ಶೆಟ್ಟಿ

ಕೇಂದ್ರ ಮತ್ತು ರಾಜ್ಯದ ಸಿವಿಲ್‌ ಸರ್ವಿಸ್‌ ಪರೀಕ್ಷೆಗಳ (ಸಿಎಸ್‌ಇ) ತಯಾರಿಗೆ ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ  ನೀಡಲು ಇಂಟಿಗ್ರೇಟೆಡ್‌ ಪದವಿ ಕೋರ್ಸ್‌ಗಳನ್ನು ‘ಯುನಿರ್ವಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌’ (ಯುಎಸ್‌ಎ) ಆರಂಭಿಸಿದೆ. ವಸತಿ ಕಾಲೇಜಾಗಿರುವ ಇದು ಬೆಂಗಳೂರು ವಿಶ್ವವಿದ್ಯಾಲಯದಿಂದ ‘ಅಫಿಲಿಯೇಷನ್‌’ ಪಡೆದಿದೆ.

ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುವಷ್ಟರಲ್ಲಿ 22ರಿಂದ 23 ವರ್ಷದವರಾಗಿರುತ್ತಾರೆ. ಕೆಲವರು ಸ್ನಾತಕೋತ್ತರ ಪದವಿ ನಂತರ (25 ವರ್ಷದ ನಂತರ) ಸಿವಿಲ್‌ ಸರ್ವಿಸ್‌ ಪರೀಕ್ಷೆಗಳತ್ತ ಆಕರ್ಷಿತರಾಗುತ್ತಾರೆ. ಬಳಿಕ ಪರೀಕ್ಷಾ ತಯಾರಿ ಮತ್ತು ಯಶಸ್ಸುಗಳಿಸಲು ಕೆಲ ವರ್ಷಗಳೇ ಬೇಕಾಗುತ್ತವೆ. ಈ ಅವಧಿಯಲ್ಲಿ ‘ಡ್ರಾಪ್‌ಔಟ್‌’ ಆಗುವವರೇ ಹೆಚ್ಚು. ಈ ಕುರಿತು ಸಮೀಕ್ಷೆ ನಡೆಸಿ ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ ಎನ್ನುತ್ತಾರೆ ಯುಎಸ್‌ಎ ಸ್ಥಾಪಕ ನಿರ್ದೇಶಕ ಉಪೇಂದ್ರ ಶೆಟ್ಟಿ.

ಏನೇನು ಕಲಿಸಲಾಗುತ್ತದೆ:

ಬೆಂ.ವಿ.ವಿ ಪಠ್ಯವನ್ನಾಧರಿಸಿ ಬಿ.ಎ, ಬಿ.ಕಾಂ ತರಗತಿಗಳು ನಡೆಯುತ್ತವೆ. ಅದರ ಜತೆಗೆ ಯುಪಿಎಸ್‌ಸಿ ಪಠ್ಯಕ್ರಮವನ್ನು ಆಧರಿಸಿ ಇತಿಹಾಸ, ಇಂಡಿಯನ್‌ ಪಾಲಿಟಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಪ್ರಚಲಿತ ವಿದ್ಯಮಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಸಾಮಾನ್ಯ ಅಧ್ಯಯನ ಮತ್ತು ಐಚ್ಛಿಕ ವಿಷಯಗಳ ಪಠ್ಯದ ವಿಸ್ತೃತ ಬೋಧನೆಯೂ ನಡೆಯುತ್ತದೆ.

ಕೋರ್ಸ್‌ನ ಅವಧಿ:

ಇದು 3+1=4 ವರ್ಷದ ಕೋರ್ಸ್‌. ಮೂರು ವರ್ಷ ಪದವಿ ಕೋರ್ಸ್‌. ನಂತರದ 10 ತಿಂಗಳು ಪೂರ್ಣ ಪ್ರಮಾಣದಲ್ಲಿ ಸಿವಿಲ್‌ ಸರ್ವಿಸ್‌ ಪರೀಕ್ಷೆ ಪಠ್ಯ ಆಧರಿಸಿದ ತರಗತಿಗಳನ್ನು ನಡೆಯುತ್ತವೆ. ಆ ನಂತರವಷ್ಟೇ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ. ಅಭ್ಯರ್ಥಿಗಳ ಯಾವುದೇ ಪ್ರಯತ್ನಗಳು ‘ವೇಸ್ಟ್‌’ ಆಗದಂತೆ ಎಚ್ಚರವಹಿಸುತ್ತೇವೆ ಎನ್ನುತ್ತಾರೆ ಅವರು ತಿಳಿಸುತ್ತಾರೆ.

ಪ್ರವೇಶ ಶುಲ್ಕ:

ವಸತಿ ಸಹಿತ ಕಾಲೇಜು ಆಗಿರುವುದರಿಂದ ಪ್ರವೇಶ ಶುಲ್ಕ ವರ್ಷಕ್ಕೆ ₹ 1.80 ಲಕ್ಷದವರೆಗೆ ಬರುತ್ತದೆ. ಸದ್ಯಕ್ಕೆ ಕೆಂಗೇರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದೆ. ಅಲ್ಲಿಗೆ ಸಮೀಪದ ರಾಮೋಹಳ್ಳಿಯ ಕೋಲೂರಿನಲ್ಲಿ 10.5 ಎಕರೆ ವ್ಯಾಪ್ತಿಯಲ್ಲಿ ಕಾಲೇಜಿನ ಕ್ಯಾಂಪಸ್‌ ಸಿದ್ಧವಾಗುತ್ತಿದ್ದು, ಅಕ್ಟೋಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಅಲ್ಲಿ ಸುಸಜ್ಜಿತ ಗ್ರಂಥಾಲಯ, ತರಗತಿ ಕೊಠಡಿ, ಅಧ್ಯಯನ ಕೊಠಡಿ, ವಸತಿ ಕೊಠಡಿ, ಡೈನಿಂಗ್‌ ಹಾಲ್‌, ಕಂಪ್ಯೂಟರ್‌ ಲ್ಯಾಬ್‌, ಸಭಾಂಗಣ, ಕ್ರೀಡಾಂಗಣ ಎಲ್ಲ ಸೌಲಭ್ಯವೂ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

‘2017–18ನೇ ವರ್ಷದಲ್ಲಿ ಒಟ್ಟು 69 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ 90 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆದಿರುವವರಲ್ಲಿ ಶೇ 70ರಷ್ಟು ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್‌ ಓದಿದವರು. ಜೆಇಇ, ನೀಟ್‌ ಪರೀಕ್ಷೆಗಳನ್ನು ಬರೆದವರೂ ಇದ್ದಾರೆ. ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಹೋಗಲು ಇಷ್ಟವಿಲ್ಲದವರು ಅಥವಾ ಆ ಕೋರ್ಸ್‌ಗಳ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದರ ಬದಲಿಗೆ ಈಗಿನಿಂದಲೇ ಸಿವಿಲ್‌ ಸರ್ವೀಸ್‌ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದು ಬಯಸುವವರು ನಮ್ಮಲ್ಲಿ ಪ್ರವೇಶ ಪಡೆದಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ಯುಪಿಎಸ್‌ಸಿ ನಡೆಸುವ ಸಿವಿಲ್ ಸರ್ವಿಸ್‌ ಪರೀಕ್ಷೆಗಳನ್ನು ‘ಮದರ್ ಆಫ್‌ ಆಲ್‌ ಕಾಂಪಿಟೆಟಿವ್‌ ಎಕ್ಸಾಂಸ್‌’ ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಪಾಸಾಗದವರು ಕೆಪಿಎಸ್‌ಸಿ ಅಥವಾ ಇತರ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಲ್ಲಿ ಪಾಸಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಬ್ಯಾಂಕಿಂಗ್‌, ರೈಲ್ವೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಸುಲಭವಾಗಿ ತೇರ್ಗಡೆಯಾಗಿ ಉದ್ಯೋಗ ಗಿಟ್ಟಿಸಲು ಇವರಿಗೆ ನೆರವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಪರ್ಯಾಯ ವ್ಯವಸ್ಥೆಯೂ ಇದೆ:

ವರ್ಷಕ್ಕೆ ₹1.80 ಲಕ್ಷ ಖರ್ಚು ಮಾಡಲಾಗದ ಪದವಿ ವಿದ್ಯಾರ್ಥಿಗಳು ವಿಜಯನಗರದಲ್ಲಿನ ಯುನಿವರ್ಸಲ್‌ ಕೋಚಿಂಗ್‌ ಸೆಂಟರ್‌ನಲ್ಲಿ (ಯುಸಿಸಿ) ಮೂರು ವರ್ಷದ ವಾರಾಂತ್ಯದ ಕೋರ್ಸ್‌ಗೆ ಪ್ರವೇಶ ಪಡೆದು ತಯಾರಿ ನಡೆಸಬಹುದು. 

ಮುಂದಿನ ಯೋಜನೆಗೆಳು:

‘ಕಾಲೇಜಿಗೆ ಸ್ವಾಯತ್ತ ಸ್ಥಾನ ಪಡೆದು ಸಿವಿಲ್‌ ಸರ್ವಿಸ್‌ ಪರೀಕ್ಷಾ ತಯಾರಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ತುಡಿತ ಇದೆ. ಸಿವಿಲ್‌ ಸರ್ವಿಸ್ ಪರೀಕ್ಷೆಗಳಲ್ಲಿರುವ ಐಚ್ಛಿಕ ವಿಷಯಗಳಲ್ಲಿ ಪ್ರಮುಖವಾದವನ್ನು ಪದವಿ ಕೋರ್ಸ್‌ಗಳ ಸಂಯೋಜನೆಯಲ್ಲಿ ಸೇರಿಸಿ ತರಗತಿಗಳನ್ನು ನಡೆಸಲು ಉದ್ದೇಶಿಸಿದ್ದೇನೆ. ಸಿವಿಲ್‌ ಸರ್ವಿಸ್‌ ಕೇಂದ್ರೀಕರಿಸಿ ಎಂಬಿಎ ಇಂಟಿಗ್ರೇಟೆಡ್‌ ಕೋರ್ಸ್‌ ಆರಂಭಿಸಲು ಯೋಜಿಸಿದ್ದೇನೆ’ ಎನ್ನುತ್ತಾರೆ ಅವರು.

ಹೆಚ್ಚಿನ ಮಾಹಿತಿಗೆ: 98455–12051, 98455–12052

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !