ಮತ್ತು ಮತ್ತೂ ಮತ್ತು...

7

ಮತ್ತು ಮತ್ತೂ ಮತ್ತು...

Published:
Updated:

ನಶಾ ಹಿ ನಶಾ... ಈ ಹಾಡು ಕೇಳಿದಾಗಲೆಲ್ಲ.. ನಮ್ಮ ಕನ್ನಡದ ಪದವೇ ಮಸ್ತಾಗಿದೆ.. ‘ಮತ್ತು’ ಮತ್ತು... ಮತ್ತೂ... ಮತ್ತು ಎಂಬಂತೆ. ಮತ್ತೇರಿಸುವ..ಅಮಲು ಆನಂದದಾಯಕವೆನಿಸುವುದೇ ಆರಂಭ. ನಂತರ ಅದಕ್ಕಾಗಿ ತಹತಹ, ಚಡಪಡಿಕೆಗಳು ಹುಟ್ಟಿಕೊಂಡರೆ ಅದು ಚಟ. ಬೇಕೇಬೇಕು... ಇಲ್ಲದಿರೆ ನರತಂತುಗಳೆಲ್ಲ ನಡುಗಿದಂತೆ, ಮನದೊಳಗೆ ಆತಂಕದ ಅಲೆಗಳು ಹರಿದಾಡಿದಂತೆನಿಸತೊಡಗಿದ್ದರೆ ಅದು ವ್ಯಸನ. ಚಟಾವಲಂಬಿಗಳಾದ ಲಕ್ಷಣ.

ಮಾನಸಿಕ ಆತಂಕ, ಗೊಂದಲ ಹಾಗೂ ತಲ್ಲಣಗಳನ್ನು ನಿವಾರಿಸಲು, ತಮ್ಮದೇ ಆರಾಮದಾಯಕ ವಲಯದೊಳು ವಿಹರಿಸಲು, ಆ ಕ್ಷಣಕ್ಕೆ ಆರಾಮದಾಯಕವೆನಿಸುವ ಭಾವ ನೀಡಲು ಕಾರಣ ಈ ಮತ್ತೇರಿಸುವ ಮಾದಕ ದ್ರವ್ಯಗಳಲ್ಲ... ಅವುಗಳು ನಮ್ಮ ಮಿದುಳಿನಲ್ಲಿರುವ ಡೊಪೆಮನ್‌ ಎಂಬ ರಾಸಾಯನಿಕಗಳ ಸ್ರಾವವನ್ನು ಹೆಚ್ಚಿಸುವ ಅವುಗಳ ಗುಣಗಳಿಂದ.

ನಮ್ಮೊಳಗಿನ ಆನಂದವನ್ನು ಉತ್ತೇಜಿಸಲು, ಉದ್ದೀಪಿಸಲು ಈ ಚಟಗಳಿಗೆ ಮೊರೆ ಹೋಗಬೇಕೆ? ಮಾದಕ ದ್ರವ್ಯಗಳು ನಮ್ಮ ಅನಿವಾರ್ಯವೂ ಅಲ್ಲ, ಅಗತ್ಯವೂ ಅಲ್ಲ. ಹಾಗಾಗಿ ಅವಲಂಬಿಗಳಾಗುವ ಯಾವ ಸಂದರ್ಭವೂ ನಿಮಗಿಲ್ಲ.

ಅದು ಆನಂದ ನೀಡುತ್ತದೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ. ಜೀವನವನ್ನು ಆನಂದಿಸಲು ಮತ್ತು ಬೇಕು. ಆದರೆ ಅದು ಮಾದಕ ದ್ರವ್ಯಗಳದ್ದೇ ಆಗಬೇಕೆಂದೇನಿಲ್ಲ. ಸಾಕಷ್ಟು ಸೃಜನಾತ್ಮಕವಾಗಿರುವ ಅಮಲುಗಳಿವೆ. ಸಂಗೀತ, ಓದು, ಪೇಂಟಿಂಗ್‌, ಆಕಾಶ ವೀಕ್ಷಣೆ, ನಡಿಗೆ, ಕ್ರೀಡೆ... ಹೀಗೆ ಡೊಪೆಮನ್‌ ಅನ್ನು ಆನಂದಕ್ಕಾಗಿಯೇ ಸ್ರವಿಸುವಂತೆ ಮಾಡುವ ಹಲವಾರು ಅಮಲುಗಳಿವೆ. ಅವನ್ನು ಅಪ್ಪಿಕೊಳ್ಳುವುದು ಒಳಿತು. ಇಷ್ಟಕ್ಕೂ ನಿರಾಳವಾಗಲು, ಮಾನಸಿಕ ಶಾಂತಿ ಕದಡದಂತೆ ಇರಲು, ಖುಷಿಯಿಂದಿರಲು ನಮ್ಮ ಆಂತರ್ಯ ಮತ್ತು ಅಂತಃಶಕ್ತಿಗಳು ಕಾರಣವಾಗುತ್ತವೆಯೇ ಹೊರತು ಈ ಬಾಹ್ಯ ಚಟಗಳಲ್ಲ.

ಅಂದಹಾಗೆ ಇಂದು ಮಾದಕ ದ್ರವ್ಯಗಳ ವಿರೋಧಿ ದಿನ. ಆ ಮತ್ತನ್ನು ತಿರಸ್ಕರಿಸಿ... ನಾನು ಮತ್ತು... ಮತ್ತೇನು? ಮತ್ತೇನೆಲ್ಲ... ಎಂದು ಯೋಚಿಸಿ... ಹವ್ಯಾಸಗಳು ನಿಮ್ಮನ್ನಪ್ಪಿದಷ್ಟೂ ದುರಭ್ಯಾಸಗಳಿಂದ ದೂರವಾಗುತ್ತ ಹೋಗುವಿರಿ. ನಿಮ್ಮಿಂದಲೇ ಇದು ಅಸಾಧ್ಯವಾದರೆ ತಜ್ಞರ ಸಹಾಯ ಪಡೆಯಿರಿ. ಚಟ ನಿರ್ಮೂಲನ ಕೇಂದ್ರಗಳ ಸಹಾಯ ಪಡೆಯಿರಿ. ಚೂರು ಆಪ್ತ ಸಮಾಲೋಚನೆ, ಚೂರು ಔಷಧಿ ಮತ್ತು ದೃಢ ನಿರ್ಧಾರಗಳೇ ನಿಮ್ಮ ಸಹಾಯಕ್ಕೆ ಬರುತ್ತವೆ.


ಡಾ.ಮನೋಜ್ ಕುಮಾರ್ ಶರ್ಮಾ

ನಶೆಮುಕ್ತ ಸುಖೀ ಜಿವನಕ್ಕಾಗಿ ಜಾಗೃತರಾಗಿರಿ, ಈ ಜಾಗೃತಿ ನಿರಂತರವಾಗಿರಲಿ, ಮಾದಕ ವ್ಯಸನಗಳಿಂದ ಸದಾ ದೂರವಿರಿ
-ಡಾ.ಮನೋಜ್ ಕುಮಾರ್ ಶರ್ಮಾ
ಮನೋವೈದ್ಯ, ನಿಮ್ಹಾನ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !