ಸುರಳಿ ಪಟಾಕಿ ಹೊಡೀಬೇಡಿ

7

ಸುರಳಿ ಪಟಾಕಿ ಹೊಡೀಬೇಡಿ

Published:
Updated:
Deccan Herald

ಪಟಾಕಿಯನ್ನೆಲ್ಲ ‘ಠುಸ್‌’ ಮಾಡ್ತೀರಾ?

ಸುಪ್ರೀಂ ಕೋರ್ಟ್‌, ಪಟಾಕಿಯನ್ನು ಹೊಡಿಯೋದೇ ಬೇಡ ಎಂದೇನೂ ಹೇಳಿಲ್ಲ. ಹೊಡೀರಿ, ಆದ್ರೆ ಈ ಟೈಮಿನಲ್ಲಷ್ಟೇ ಹೊಡೀರಿ, ಇಷ್ಟೇ ಶಬ್ದದ ಪಟಾಕಿ ಹೋಡೀರಿ ಅಂತ ಹೇಳಿದೆಯಷ್ಟೆ. 175 ಡೆಸಿಬಲ್‌ಗಿಂತ ಕಡಿಮೆ ಸದ್ದು ಮಾಡುವ ಯಾವ ಪಟಾಕಿಯನ್ನೂ ನಾವು ಠುಸ್‌ ಅನಿಸಲ್ಲ.

‘ಲಕ್ಷ್ಮಿ ಬಾಂಬ್‌’ ಹೊಡೆಯೋಕೆ ಅವಕಾಶ ಇಲ್ಲ ಅಂದ್ರೆ ಹೆಂಗೆ ಹಬ್ಬ ಮಾಡೋದು?

ಹಲವು ಕಂಪನಿಗಳು ಡೆಸಿಬಲ್ ಮಿತಿಯನ್ನು ಮೀರುವುದಿಲ್ಲ. ಲಕ್ಷ್ಮಿ ಬಾಂಬ್‌ ಮಾಡುವ ಸದ್ದು 175 ಡೆಸಿಬಲ್‌ಗಿಂತ ಕಡಿಮೆ ಇದೆ; ಹೊಡೀಬಹುದು. ಸುತಳಿ (ಸುರಳಿ) ಪಟಾಕಿ ಹೊಡೀಬೇಡಿ. ಅದು ಕೂಗುಮಾರಿ.

ಮನೆ–ಮನೆಗೂ ಕಾವಲು ಹಾಕ್ತೀರಾ?

ನೋಡ್ರಿ, ಈ ತಿಂಗಳ 5 ರಿಂದ 8 ರವರೆಗೆ ರಾತ್ರಿ 8ರಿಂದ 10ರವರೆಗೆ ಯಾವಾಗ್‌ ಬೇಕಾದ್ರೂ ಪಟಾಕಿ ಹೊಡೀರಿ. ನಿಮ್ಮನ್ನು ಯಾರೂ ಏನೂ ಕೇಳಂಗಿಲ್ಲ. ಬೇರೆ ಟೈಮ್‌ನಲ್ಲಿ ಹೊಡೆಯದಂತೆ ಪೊಲೀಸರೇ ಯಾಕೆ ಮಾನಿಟರ್‌ ಮಾಡ್ಬೇಕು? ಅವರ ಸಂಖ್ಯೆ ಕಡಿಮೆ ಇದೆ. ನಿಮ್‌ ಮನೆಗೆ ಅವರು ಬರುವಂತಹ ಸ್ಥಿತಿ ತಂದ್ಕೋಬೇಡಿ.

ಬೇರೆ ಅವಧಿಯಲ್ಲೂ ಪಟಾಕಿ ಹೊಡೆದರೆ?

ಜನರಲ್ಲೂ ಈಗ ಅರಿವು ಮೂಡಿದೆ. ನೋಡಿ ಬೇಕಾದ್ರೆ... ಕೋರ್ಟ್‌ ಹೇಳಿದ ಸಮಯದಲ್ಲಷ್ಟೇ ಅವರು ಪಟಾಕಿ ಹೊಡೀತಾರೆ. ಆದೇಶ ಜಾರಿಯ ಹೊಣೆ ಪೊಲೀಸ್‌ ಇಲಾಖೆಯದು. ಸಂಬಂಧಿತ ಎಲ್ಲ ಇಲಾಖೆಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಅರಿವು ಮೂಡಿಸುವುದೇ ಮುಖ್ಯ ಕೆಲಸ. ಬೇಕಂತಲೇ ಬೇರೆ ಸಮಯದಲ್ಲಿ ಪಟಾಕಿ ಹೊಡೆಯೋಕೆ ಹೋದ್ರೆ ಕ್ರಮ ತಗೋತೀವಿ.

ಏನಿದು ಹಸಿರು ಪಟಾಕಿ?

ಪಾದರಸ, ಸೀಸದಂತಹ ಭಾರದ ರಾಸಾಯನಿಕ ಧಾತುಗಳಿಂದ ಪಟಾಕಿ ತಯಾರು ಮಾಡ್ತಾರೆ. ಪಟಾಕಿ ಹೊಡೆದ ಮೇಲೆ ಅದರ ಶೇಷ, ತ್ಯಾಜ್ಯಕ್ಕೆ ಸೇರಿ, ಆ ತ್ಯಾಜ್ಯ ನೀರಿಗೆ ಸೇರಿ, ಆ ನೀರನ್ನು ಕುಡಿದ ಮೀನು, ತರಕಾರಿಯನ್ನು ನಾವೆಲ್ಲ ತಿಂದ್ರೆ ಅನಾಹುತ ಆಗಲ್ವೆ? ಮಾಲಿನ್ಯ ತಡೆಗೆ ತಯಾರಿಸುವ ಕಡಿಮೆ ರಾಸಾಯನಿಕದ ಪಟಾಕಿಯೇ ಹಸಿರು ಪಟಾಕಿ. ಮುಂದೆ ಎಲ್ಲೆಡೆ ಸಿಗುತ್ತೆ ಇರಿ.

ಕೋರ್ಟ್‌ ತಿವಿದರಷ್ಟೇ ಮಂಡಳಿಗೆ ಎಚ್ಚರವಾಗೋದಾ?

ಮಾಲಿನ್ಯ ನಿಯಂತ್ರಣ ಮಂಡಳಿ 2000 ಇಸವಿಯಿಂದಲೂ ಈ ಕುರಿತು ಅರಿವು ಮೂಡಿಸ್ತಲೇ ಇದೆ. ಆದ್ರೆ, ಯಾರೂ ಕಿವಿಗೆ ಹಾಕ್ಕೊಳ್ಳಿಲ್ಲ.  ಕೋರ್ಟ್‌ ಹೇಳಿದೊಡನೆ ಎಲ್ಲರ ಕಿವಿಗೂ ಬಿತ್ತು. ಏನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಾಗಿ
ಬಿಟ್ಟಿತು. ‘ತೀರ್ಥ’ ಆಗೋದು ಹಿಂಗೇ ಅಲ್ವಾ?

ಸಂದರ್ಶನ: ಪ್ರವೀಣ ಕುಲಕರ್ಣಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !