‘ಆರ್ಥಿಕ ಕ್ಷೇತ್ರದಲ್ಲಿ ಬೆಳೆಯುವಾಸೆ’

7
‘ಕ್ಯಾಟ್‌’ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಉಡುಪಿಯ ನಿರಂಜನ ಪ್ರಸಾದ್

‘ಆರ್ಥಿಕ ಕ್ಷೇತ್ರದಲ್ಲಿ ಬೆಳೆಯುವಾಸೆ’

Published:
Updated:
Prajavani

*‘ಕ್ಯಾಟ್‌’ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದೀರಿ, ಹೇಗನಿಸುತ್ತಿದೆ?
ಇದು ಅನಿರೀಕ್ಷಿತ ಫಲಿತಾಂಶ. ತುಂಬಾ ಖುಷಿಯಾಗಿದೆ. ಕನಸುಗಳಿಗೆ ರೆಕ್ಕೆ ಬಂದಂತಾಗಿದೆ. 

*ಮೊದಲ ಯತ್ನದಲ್ಲೇ ಯಶಸ್ಸು ಸಿಕ್ಕಿದೆ, ಹೇಗೆ ಸಾಧ್ಯವಾಯಿತು?
ಕ್ಯಾಟ್‌ ಪರೀಕ್ಷೆಗೆ ಅಂಥ ಟೈಂ ಟೇಬಲ್ ಹಾಕಿಕೊಂಡು ಓದಲಿಲ್ಲ. ಕಾಲೇಜು ಪರೀಕ್ಷೆಗೆ ಓದುವುದರ ಜತೆಗೆ ಕ್ಯಾಟ್‌ಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಓದಿದೆ. ಜಿಆರ್‌ಇ ಪರೀಕ್ಷೆಯಲ್ಲೂ ಮೊದಲ ಯತ್ನದಲ್ಲೇ 340 ಅಂಕಗಳಿಗೆ 338 ಅಂಕ ಸಿಕ್ಕಿತ್ತು. ಎಷ್ಟು ಗಂಟೆ ಓದಿದೆ ಎನ್ನುವುದಕ್ಕಿಂತ, ಓದಿದ್ದು ತಲೆಗೆ ಹೋಗುವುದು ಮುಖ್ಯ.

*ಓದುವುದನ್ನು ಬಿಟ್ಟರೆ ಬೇರೆ ಹವ್ಯಾಸಗಳೇನಿವೆ?
ಚೆಸ್‌, ಸ್ವಿಮ್ಮಿಂಗ್ ಅಂದ್ರೆ ಇಷ್ಟ. ವೃತ್ತಿಪರ ಆಟಗಾರನಲ್ಲ. ಓದಿನ ಮಧ್ಯೆ ರಿಲ್ಯಾಕ್ಸ್ ಮಾಡೋಕೆ ಆಡ್ತೀನಿ. ಅಪರೂಪಕ್ಕೆ ಸ್ನೇಹಿತರ ಜತೆ ಪ್ರವಾಸಕ್ಕೆ ಹೋಗುತ್ತೇನೆ. 

*ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?
ಭವಿಷ್ಯದಲ್ಲಿ ಗುರಿ ಇಟ್ಟುಕೊಂಡರೆ ಸಾಲದು. ಗುರಿ ತಲುಪಲು ಶ್ರಮ ಹಾಕಬೇಕು. ಕಷ್ಟದ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡಬೇಕು. ಕಷ್ಟಪಟ್ಟರೆ ಪ್ರತಿಫಲ ಸಿಗುವುದು ಖಚಿತ. 

*ಕ್ಯಾಟ್‌, ಜಿಆರ್‌ಇ ಆಯ್ತು ಮುಂದೇನು?
ನಾನು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ. ಆದರೆ, ಆಸಕ್ತಿ ಕ್ಷೇತ್ರ ಎಕನಾಮಿಕ್ಸ್‌. ದೇಶದ ಆರ್ಥಿಕತೆಗೆ ಬಲ ತುಂಬುವಂತಹ ಯೋಜನೆ ರೂಪಿಸುವ ಉದ್ದೇಶವಿದೆ. ಪ್ರತಿಷ್ಠಿತ ಕಂಪನಿಯೊಂದರ ಉನ್ನತ ಹುದ್ದೆಗೇರುವ ಕನಸೂ ಇದೆ.

*ಆರ್ಥಿಕ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಅಪ್ಪ ಆರ್ಥಿಕ ತಜ್ಞ. ಮನೆಯಲ್ಲಿ ಸಹಜವಾಗಿ ಆರ್ಥಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಪ್ಪನ ಜತೆ ವಾದ ಮಾಡುತ್ತಲೇ ಆರ್ಥಿಕ ಕ್ಷೇತ್ರದತ್ತ ಸೆಳೆತ ಶುರುವಾಯಿತು. 

*ಐಐಟಿ ಕಾಲೇಜು ಜೀವನ ಹೇಗಿದೆ?
ಕಲಿಕೆಗೆ ಅತ್ಯುತ್ತಮ ವಾತಾವರಣ ಇದೆ. ಲವ್‌, ಮೋಜು, ಮಸ್ತಿಗೆ ಅವಕಾಶ ಇಲ್ಲ. ಸಾಧನೆಯ ಕನಸು ಹೊತ್ತು ಬಂದವರೇ ಇಲ್ಲಿ ಹೆಚ್ಚಿದ್ದಾರೆ. ಓದುವುದು, ಕ್ಲಾಸ್‌, ಕಂಪ್ಯೂಟರ್‌, ಸ್ನೇಹಿತರ ಜತೆಗೆ ಹರಟೆ ಬಿಟ್ಟರೆ ಬೇರೇನೂ ಇಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !