ಶುಕ್ರವಾರ, ನವೆಂಬರ್ 22, 2019
20 °C

ಅಮೆರಿಕದ ಜತೆ ಮಾತುಕತೆ ಇಲ್ಲ– ಇರಾನ್‌

Published:
Updated:
Prajavani

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಸಭೆಯ ಸಾಧ್ಯತೆಯನ್ನು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಬುಧವಾರ ತಿರಸ್ಕರಿಸಿದ್ದಾರೆ.

ಅಮೆರಿಕವು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅನ್ನು ವಜಾಗೊಳಿಸಿದ ಬಳಿಕ ಇರಾನ್‌ ಅಧ್ಯಕ್ಷರ ಜತೆಗೆ ಷರತ್ತುಗಳಿಲ್ಲದೆ ಮಾತುಕತೆಗೆ ಸಿದ್ಧ ಎಂದು ಹೇಳಿತ್ತು.

ಆದರೆ, ಇಸ್ಲಾಮಿಕ್‌ ದೇಶಗಳ ವಿರುದ್ಧ ಅಮೆರಿಕ ಗರಿಷ್ಠ ಒತ್ತಡದ ಕ್ರಮಗಳನ್ನು ಮುಂದುವರೆಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ಹೇಳಿದ್ದಾರೆ.

‘ಆರ್ಥಿಕ ಭಯೋತ್ಪಾದನೆ’ಯನ್ನು ವಾಷಿಂಗ್ಟನ್‌ ಕೊನೆಗಾಣಿಸಿದ ನಂತರವಷ್ಟೇ ಎರಡೂ ದೇಶಗಳ ನಡುವೆ ಮಾತುಕತೆ ಸಾಧ್ಯ ಎಂದು ಇರಾನ್‌ ತಿಳಿಸಿದೆ.

‘ಬೋಲ್ಟನ್‌ ವಜಾ ತೀರ್ಮಾನವು ಅಮೆರಿಕದ ಆಂತರಿಕ ವಿಷಯ. ಈ ಕ್ರಮದಿಂದ ಉಭಯ ದೇಶಗಳ ನಡುವೆ ಉತ್ತಮ ಸಂಬಂಧ ವೃದ್ಧಿಸುತ್ತದೆ ಎಂಬುದನ್ನೂ ಈಗಲೇ ಊಹಿಸಲಾಗದು’ ಎಂದು ಇರಾನ್‌ ಹೇಳಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಶಮನಗೊಳಿಸಲು ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೋನ್‌ ಕಳೆದ ತಿಂಗಳು ಟ್ರಂಪ್‌– ರೌಹಾನಿ ಸಭೆ ಕುರಿತು ಪ್ರಸ್ತಾಪಿಸಿದ್ದರು.

ಪ್ರತಿಕ್ರಿಯಿಸಿ (+)