ಶನಿವಾರ, ನವೆಂಬರ್ 16, 2019
22 °C

‘ಅಮೆರಿಕ ಜೊತೆ ಸಂಧಾನ ಅಸಾಧ್ಯ’

Published:
Updated:

ಟೆಹರಾನ್‌: ಸೌದಿಯಲ್ಲಿನ ತೈಲ ಬಾವಿಗಳ ಮೇಲೆ ನಡೆದ ದಾಳಿಗೆ ಇರಾನ್‌ ಕಾರಣ ಎಂದು ಅಮೆರಿಕ ದೂರಿದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಹೆಚ್ಚುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಅಮೆರಿಕದೊಂದಿಗೆ ಯಾವುದೇ ಸಂಧಾನ ಸಾಧ್ಯವಿಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ.

ಬೇರೆ ಯಾವುದೇ ತಂತ್ರಗಳ ಮೂಲಕ ಇಸ್ಲಾಮಿಕ್‌ ಗಣರಾಜ್ಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗದೇ ಇರುವುದರಿಂದ ಇರಾನ್‌ ಮೇಲೆ ಒತ್ತಡ ಹೆಚ್ಚಿಸುವ ನೀತಿ ಅನುಸರಿಸುತ್ತಿದೆ ಎಂದು ಅಯಾತೊಲ್ಲ ಅಲಿ ಖಮೇನಿ ಹೇಳಿದರು.

 

ಪ್ರತಿಕ್ರಿಯಿಸಿ (+)