ಭಾನುವಾರ, ಡಿಸೆಂಬರ್ 8, 2019
20 °C

‘ನಿರ್ಬಂಧವನ್ನು ಎದುರಿಸುತ್ತೇವೆ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೆಹರಾನ್‌: ‘ನಮ್ಮ ದೇಶದ ತೈಲ ಮತ್ತು ಆರ್ಥಿಕ ವಲಯದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ನಾವು ಹೆಮ್ಮೆಯಿಂದ ಎದುರಿಸುತ್ತೇವೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ. 

‘ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿ ಅಕ್ರಮ ಮತ್ತು ಅನ್ಯಾಯವಾಗಿ ನಮ್ಮ ಮೇಲೆ ನೀವು ನಿರ್ಬಂಧ ವಿಧಿಸಿದ್ದೀರಿ. ಈ
ಪರಿಸ್ಥಿತಿಯನ್ನು ಇರಾನ್‌ ಸಮರ್ಥವಾಗಿ ಎದುರಿಸಲಿದೆ’ ಎಂದು ಅವರು ಸೋಮವಾರ ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.

ಎಂಟು ರಾಷ್ಟ್ರಗಳಿಗೆ ವಿನಾಯಿತಿ: ಭಾರತ, ಚೀನಾ ಮತ್ತು ಜಪಾನ್‌ ಸೇರಿದಂತೆ ಎಂಟು ರಾಷ್ಟ್ರಗಳು ಇರಾನ್‌ನಿಂದ ತೈಲವನ್ನು ಖರೀದಿಸಬಹುದಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು