ಬೆವರು ಹರಿಸದೇ ಕಸರತ್ತು ಮಾಡಿ!

7

ಬೆವರು ಹರಿಸದೇ ಕಸರತ್ತು ಮಾಡಿ!

Published:
Updated:
Prajavani

ಸಪೂರ ದೇಹ ಹೊಂದುವುದಕ್ಕೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ? ಆದರೆ ಜಿಮ್‌ನಲ್ಲಿ ಗಂಟೆಗಟ್ಟಲೇ ಬೆವರು ಹರಿಸಬೇಕೆಂದರೆ ಆಸಕ್ತಿಯೇ ಮೂಡುವುದಿಲ್ಲ ಎನ್ನುವವರೇ ಹಲವರು. ಅಷ್ಟೊಂದು ಸಮಯ ಎಲ್ಲಿದೆ ಎಂದು ಹೇಳುವವರೂ ಇದ್ದಾರೆ. ಆದರೆ ಬೆವರು ಹರಿಸದೆಯೇ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ವ್ಯಾಯಾಮಗಳೂ ಇವೆ. ಇಂತಹ ವ್ಯಾಯಾಮಗಳನ್ನೇ ಐಸೊಮೆಟ್ರಿಕ್ ವ್ಯಾಯಾಮಗಳು ಎನ್ನುತ್ತಾರೆ.

ಮುಖ್ಯವಾಗಿ ಕಚೇರಿಗಳಲ್ಲಿ ಗಂಟೆಗಟ್ಟಲೇ ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವವರಿಗೆ ಇಂತಹ ವ್ಯಾಯಾಮ ಹೆಚ್ಚು ನೆರವಾಗುತ್ತದೆ. ಇವನ್ನು ಯಾವುದೇ ಒತ್ತಡವಿಲ್ಲದೇ ಸುಲಭವಾಗಿ ಮಾಡಬಹುದು. ಅಂತಹ  ವ್ಯಾಯಮಗಳ ಪಟ್ಟಿ ಇಲ್ಲಿದೆ.

ಕೈ ಮತ್ತು ಮುಷ್ಠಿ ರಕ್ಷಣೆ

* ಮುಷ್ಠಿ ತಿರುಗಿಸುವುದು

* ಕೈಗಳನ್ನು ಆಗಾಗ್ಗೆ ಒತ್ತುವುದು

* ಕೈಗಳನ್ನು ಸ್ವಲ್ಪಹೊತ್ತು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು ಮತ್ತು ಬಿಡುವುದು

* ಬೆರಳುಗಳನ್ನು ಒತ್ತುವುದು

* ಇದನ್ನು ಹತ್ತು ಬಾರಿ ಪುನರಾವರ್ತಿಸಬೇಕು

ಮೂತ್ರ ನಾಳಗಳ ಆರೋಗ್ಯಕ್ಕೆ

* ಮೂತ್ರ ನಾಳಗಳಿರುವಂತಹ ಸೊಂಟದ ಮೇಲೆ ಕೈಗಳನ್ನು ಐದು ಸೆಕೆಂಡ್ ಹಿಡಿದಿಟ್ಟುಕೊಂಡು, ವಿಶ್ರಮಿಸುವುದು. ನಂತರ ಕೈತೆಗೆಯುವುದು. ಹೀಗೆ ಐದು ಬಾರಿ, ದಿನದಲ್ಲಿ ಮೂರು ಹೊತ್ತು ಮಾಡಬೇಕು.

ಭುಜಗಳ ಸಧೃಢತೆಗೆl ಕೈಗಳನ್ನು ಗೋಡೆಗೆ ಅಂಟಿಸಿ ನೇರವಾಗಿ ೈದು ಸೆಕೆಂಡ್ ನಿಲ್ಲಬೇಕು. ಈ ರೀತಿ ದಿನದಲ್ಲಿ 10 ಬಾರಿ ಮಾಡಬೇಕು.

ಕತ್ತು ನೋವು ಶಮನ

* ಎರಡೂ ಕೈಗಳನ್ನು ಕತ್ತಿನ ಮೇಲೆ ಇಟ್ಟು ಐದು ಸೆಕೆಂಡ್‌ ಮೇಲೆ ನೋಡುತ್ತಾ ನಿಲ್ಲವುದು. ಈ ರೀತಿ ಮೂರು ಬಾರಿ ಮಾಡಬೇಕು.

ಎದೆಭಾಗದ ವ್ಯಾಯಾಮ

* ಎರಡೂ ಕೈಗಳನ್ನು ನಮಸ್ಕಾರ ಮಾಡುವಂತೆ ಜೋಡಿಸಿ 10 ಸೆಕೆಂಡ್‌ ಒತ್ತಿಟ್ಟುಕೊಂಡು ನೇರವಾಗಿ ನಿಲ್ಲಬೇಕು. ಈ ರೀತಿ ದಿನದಲ್ಲಿ ಐದು ಬಾರಿ ನಿಲ್ಲಬೇಕು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !