ಗುರುವಾರ , ನವೆಂಬರ್ 21, 2019
21 °C

ಇಸ್ರೊ ಜೊತೆ ಕೈಜೋಡಿಸಲು ಮಾರಿಷಸ್ ಬಯಕೆ

Published:
Updated:

ಮಾರಿಷಸ್: ಇಸ್ರೊದ ಚಂದ್ರಯಾನ-2 ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದ್ದು, ಭಾರತ ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನ ಮುಂದುವರಿಸುವುದಾದರೆ ಜಂಟಿ ಸಹಬಾಗಿತ್ವದಲ್ಲಿ ಪಾಲ್ಗೊಳ್ಳಲು ಸಿದ್ಧವಿರುವುದಾಗಿ ಮಾರಿಷಸ್ ಹೇಳಿಕೆ ನೀಡಿದೆ.

ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಚಂದ್ರಯಾನ-2 ಪ್ರಯತ್ನದ ಕುರಿತು ಹೇಳಿಕೆ ನೀಡಿದ್ದು, ಈ ಬಾರಿ ಚಂದ್ರನ ಮೇಲೆ ಲ್ಯಾಂಡ್ ಆಗಲು ಯಶಸ್ವಿಯಾಗಲಿಲ್ಲ. ಆದರೆ, ಈ ವಿಶೇಷ ಕಾರ್ಯಕ್ರಮದ ಮೂಲಕ ಭಾರತ ತಾಂತ್ರಿಕತೆಯಲ್ಲಿ ಮುಂದಿದೆ ಎಂಬುದನ್ನು ವಿಶ್ವಕ್ಕೆ ತಿಳಿಯುವಂತೆ ಮಾಡಿದೆ ಎಂದು ಪ್ರಶಂಸಿದ್ದಾರೆ. ಅಲ್ಲದೆ, ಇಸ್ರೊ ಜೊತೆ ಭವಿಷ್ಯದಲ್ಲಿ ಕೈಜೋಡಿಸಲು ಸಿದ್ಧವಿದೆ. ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಯತ್ನಕ್ಕಾಗಿ ಭಾರತ ಸರ್ಕಾರ ಹಾಗೂ ಇಸ್ರೊ ವಿಜ್ಞಾನಿಗಳ ತಂಡವನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ...ಭಾವುಕರಾದ ಇಸ್ರೊ ಅಧ್ಯಕ್ಷ ಶಿವನ್‌, ಸಮಾಧಾನಪಡಿಸಿದ ಪ್ರಧಾನಿ ಮೋದಿ

ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ (07-09-2019) ನಸುಕಿನಲ್ಲಿ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಅದರಿಂದ ಸಂದೇಶ ಬರಲಿಲ್ಲ. ಲಕ್ಷಾಂತರ ಮೈಲುಗಳನ್ನು ಕ್ರಮಿಸಿದರೂ ನೌಕೆಗೂ ಭಾರತದ ಭಾಹ್ಯಾಕಾಶ ಕೇಂದ್ರಕ್ಕೂ ಇದ್ದ ಸಂಪರ್ಕ ಕೇವಲ 2.1 ಕಿಲೋಮೀಟರ್ ಅಂತರದಲ್ಲಿ ಕಡಿತಗೊಂಡಿತು.

ಪ್ರತಿಕ್ರಿಯಿಸಿ (+)