ನಮ್‌ ಸ್ವಾತಂತ್ರ್ಯೋತ್ಸವ ಹೀಗೆ...

7

ನಮ್‌ ಸ್ವಾತಂತ್ರ್ಯೋತ್ಸವ ಹೀಗೆ...

Published:
Updated:
Deccan Herald

ಬಡಾವಣೆಯ ರೂಪುರೇಷೆ ಸಿದ್ಧಪಡಿಸುತ್ತೇವೆ

ಬಡಾವಣೆಯ ಬಹುತೇಕ ಎಲ್ಲ ನಿವಾಸಿಗಳು ಒಂದೆಡೆ ಸೇರಿ ಶಾಂತಿಯ ಸಂಕೇತವಾದಿ ಬಿಳಿ ಬಟ್ಟೆ ಧರಿಸಿ, ಎಲ್ಲೆಡೆ ರಂಗೋಲಿ ಬಿಡಿಸುತ್ತೇವೆ. ಹಬ್ಬದಂತೇ ಈ ದಿನವನ್ನು ಆಚರಿಸುತ್ತೇವೆ. ಎಲ್ಲ ವಯೋಮಾನದವರೂ ಎಲ್ಲ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಬಡಾವಣೆಯ ಮುಖ್ಯಸ್ಥರನ್ನು ಕರೆದು ದ್ವಜಾರೋಹಣ ಮಾಡಿಸುತ್ತೇವೆ. ಅಷ್ಟಕ್ಕೆ ಸೀಮಿತರಾಗದೆ, ಬಡಾವಣೆಯ ಅಭಿವೃದ್ಧಿ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತೇವೆ. ಅದನ್ನು ವಾರ್ಡ್‌ನ ಸದಸ್ಯರ ಗಮನಕ್ಕೆ ತಂದು ರೂಪುರೇಷೆಯನ್ನು ಕಾರ್ಯಗತಗೊಳಿಸುತ್ತೇವೆ.

–ವಿದ್ಯಾಶ್ರೀ ಗಾಣಿಗೇರ, ವಿದ್ಯಾರ್ಥಿ

***

ಸಸಿ ನೆಟ್ಟು ಫೇಸ್‌ಬುಕ್‌ನಲ್ಲಿ ಸವಾಲು

ಅದರ ಜೊತೆಗೆ, ಸ್ವಾತಂತ್ರ್ಯ ದಿನದಂದು ಪ್ರತಿವರ್ಷ ಮನೆಯ ಬಳಿ ಸಸಿಯೊಂದನ್ನು ನೆಟ್ಟು, ಅದನ್ನು ಫೋಷಣೆ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇನೆ. ಹಾಗೇ ನೆಟ್ಟ ಸಸಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ, ‘ನೀನೂ ಸಸಿ ನೆಡು’ ಎಂದು ಸ್ನೇಹಿತರೊಬ್ಬರಿಗೆ ಸವಾಲು ಎಸೆಯುತ್ತೇನೆ. ಅದನ್ನು ಸ್ವೀಕರಿಸುವ ಸ್ನೇಹಿತ, ಸಸಿ ನೆಟ್ಟು ಮತ್ತೊಬ್ಬರಿಗೆ ಅದೇ ರೀತಿ ಫೇಸ್‌ಬುಕ್‌ನಲ್ಲಿ ಸವಾಲೆಸೆಯುತ್ತಾರೆ. ಹಾಗೆ ನೆಟ್ಟ ಗಿಡಗಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಹೆಸರನ್ನು ಇಡುತ್ತೇವೆ. ಇದು ನಮ್ ಸ್ವಾತಂತ್ರ್ಯ ದಿನಾಚರಣೆಯ ಪರಿ.

–ಅಶ್ವಿನಿ, ಉದ್ಯೋಗಿ


**

ಹಸಿವು ನೀಗಿಸುವ ‘ಮಿಷನ್ ಮಿಲಿಯನ್’

ರಾಬಿನ್ ಹುಡ್ ಆರ್ಮಿ ಸಂಸ್ಥೆಯ ವತಿಯಿಂದ ಈ ಬಾರಿ ‘ಮಿಷನ್ ಮಿಲಿಯನ್’ ಅಭಿಯಾನ ಶುರು ಮಾಡಿದ್ದೇವೆ. ದೇಶದಾದ್ಯಂತ 10 ಲಕ್ಷ ಮಂದಿ ಹಸಿದವರಿಗೆ ಆಹಾರ ನೀಡಿ ಹಸಿವು ಮುಕ್ತ ಭಾರತ ನಿರ್ಮಿಸುವುದು ಈ ಅಭಿಯಾನದ ಉದ್ದೇಶ. ಜೊತೆಗೆ, ಅಕ್ಕಿ, ಬೆಳೆ ಹಾಗೂ ಗೋದಿ ಹಿಟ್ಟನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ಅದನ್ನು ಬಡವರಿಗೆ ನೀಡಲಾಗುತ್ತದೆ. ಈ ಅಭಿಯಾನದ ಜೊತೆಗೆ ನಗರಕ್ಕೆ ಸೀಮಿತ ಪಟ್ಟಂತೆ ‘ಮಿಷನ್ ಮಿಲಿಯನ್ ಪ್ಲಸ್’ ಎಂಬ ಮತ್ತೊಂದು ಅಭಿಯಾನ ಶುರು ಮಾಡಿದ್ದು, ಕೊಳಗೇರಿ ಪ್ರದೇಶಗಳಲ್ಲಿ ವೈದ್ಯರನ್ನು ಕರೆದೊಯ್ದು ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಇದೇ ನಮ್ಮ ಸ್ವಾತಂತ್ರ್ಯ ದಿನಾಚರಣೆ

– ಅಭಿಷೇಕ್, ರಾಬಿನ್ ಹುಡ್ ಆರ್ಮಿಯ ಬೆಂಗಳೂರು ವಿಭಾಗದ ಮುಖ್ಯಸ್ಥ


***

ಬಾತ್‌ರೂಮ್ ಸಿಂಗರ್ಸ್‌ಗಳಿಂದ ಗಾಯನ

ಬಾತ್‌ರೂಮ್ ಸಿಂಗರ್ಸ್‌ಗಳನ್ನು ಗುರುತಿಸಿ ಕೈಗೆ ಮೈಕ್ ಕೊಟ್ಟು ಅವರ ಪ್ರತಿಭೆ ಅನಾವರಣ ವೇದಿಕೆ ಕಲ್ಪಿಸಿಕೊಡುವುದರ ಮೂಲಕ ‘ಫ್ರಮ್ ಮಗ್ ಟು ಮೈಕ್‌’ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತದೆ. ಈ ವರ್ಷ ದಿನಾಚರಣೆಯಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಬಾತ್‌ರೂಮ್‌ ಸಿಂಗರ್ಸ್‌ಗಳಿಂದ ದೇಶಭಕ್ತಿ ಗೀತೆಗಳನ್ನು ಹಾಡಿಸಿ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಸಂಭ್ರಮಿಸುತ್ತೇವೆ. 

ಸುನೀಲ್ ಕೋಶಿ, ಗಾಯಕ, ಸಂಗೀತ ಸಂಯೋಜಕ

***

ಅಪಾರ್ಟ್‌ಮೆಂಟ್‌ನಲ್ಲೂ ಸ್ವಾತಂತ್ರ್ಯೋತ್ಸವ

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮೂರು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದ ಜತೆಗೆ ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿಯೂ ಹಾಗೇ ಆಚರಿಸುತ್ತಿದ್ದೇವೆ. ಅಪಾರ್ಟ್‌ಮೆಂಟ್‌ನ ಎಲ್ಲ ಮನೆಗಳ ಪ್ರತಿನಿಧಿಗಳು ಬೆಳಿಗ್ಗೆ ತಾರಸಿ ಮೇಲೆ ಸೇರಿ ಧ್ವಜಾರೋಹಣ ನೆರವೇರಿಸುತ್ತೇವೆ. ಅಪಾರ್ಟ್‌ಮೆಂಟ್‌ನ ಹಿರಿಯರು, ಕಿರಿಯರು, ಪುಟಾಣಿಗಳು ಎಲ್ಲರೂ ಅಲ್ಲಿ ಜಮಾಯಿಸುತ್ತೇವೆ. ರಾಷ್ಟ್ರಗೀತೆ, ನಾಡಗೀತೆ ಜತೆಗೆ ಇತರ ದೇಶಭಕ್ತಿ ಗೀತೆ, ಭಾವಗೀತೆಗಳನ್ನು ಹಾಡುತ್ತೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುತ್ತೇವೆ. ಹಿರಿಯರು ಕಟ್ಟಿದ ದೇಶದ ಈಗಿನ ಸ್ಥಿತಿಗತಿ, ಎದುರಿಸಬೇಕಿರುವ ಸವಾಲುಗಳ ಕುರಿತು ಒಂದಿಬ್ಬರು ಮಾತನಾಡುತ್ತೇವೆ. ಇದೇ ವೇಳೆ ದೇಶ ಬೆಳೆದು ಬಂದಿರುವುದರ ಸಿಂಹಾವಲೋಕನದ ಜತೆಗೆ ಪ್ರಜೆಗಳಾಗಿ ಆತ್ಮಾವಲೋಕನವನ್ನೂ ಮಾಡಿಕೊಳ್ಳುತ್ತೇವೆ. ಬಳಿಕ ಎಲ್ಲರೂ ಸಿಹಿ ತಿನಿಸು ತಿಂದು ಪರಸ್ಪರ ಶುಭಕೋರುತ್ತೇವೆ. ಇದೇ ರೀತಿ ಕನ್ನಡ ರಾಜ್ಯೋತ್ಸವ ಮತ್ತು ಗಣರಾಜ್ಯೋತ್ಸವವನ್ನೂ ಅಪಾರ್ಟ್‌ಮೆಂಟ್‌ನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತೇವೆ.

- ಬಿ.ವಿ.ಮಂಜುನಾಥ್‌, ಅಧ್ಯಕ್ಷರು, ಪಿರಮಿಡ್‌ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌, ರಾಜರಾಜೇಶ್ವರಿ ನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !