ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಕುಳಿಯಾಡುವ ಮುನ್ನ

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಣ್ಣದೋಕುಳಿ ಆಡುವಾಗ ಚರ್ಮ, ಕೂದಲು, ಕಣ್ಣು ಮತ್ತು ಶ್ವಾಸಕೋಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅದಕ್ಕಾಗಿ ಒಂದಿಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೆ ರಾಸಾಯನಿಕ ಮುಕ್ತ ಅಥವಾ ರಾಸಾಯನಿಕಯುಕ್ತ ಬಣ್ಣಗಳು ನಮ್ಮ ಅಂದಗೆಡಿಸದಂತೆ ಹಬ್ಬವನ್ನು ಆನಂದಿಸಬಹುದು.

ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಿಸಿ ಮಾಡಿ ಇಡೀ ದೇಹಕ್ಕೆ ಹಚ್ಚಿಕೊಳ್ಳಿ. ಎಣ್ಣೆ ಹಚ್ಚಿಕೊಂಡು ಹೊರಹೋದರೆ ಚರ್ಮ ಕಪ್ಪಾಗುತ್ತದೆ ಎಂಬ ಭಯ ಬೇಡ. ಬಣ್ಣಗಳಲ್ಲಿರುವ ರಾಸಾಯನಿಕ ಚರ್ಮಕ್ಕೆ ಹಾನಿ ಮಾಡದಂತೆ ಎಣ್ಣೆ ತಡೆಯುತ್ತದೆ

ಮೈ ಕೈಗೆ ಎಣ್ಣೆ ಹಚ್ಚಿಕೊಳ್ಳಲಾಗದಿದ್ದರೆ ಬಣ್ಣ ಹಚ್ಚುವುದಕ್ಕೂ ಮೊದಲು ಅಲೋವೆರಾ ಜೆಲ್‌, ಸೌತೆಕಾಯಿ ರಸ ಅಥವಾ ರೋಸ್‌ ವಾಟರ್‌ ಲೇಪಿಸಿಕೊಳ್ಳಿ. ಒಂದು ವೇಳೆ ಓಕುಳಿಯಾಡಿದ ನಂತರ ಚರ್ಮದಲ್ಲಿ ಉರಿ, ನವೆ ಕಾಣಿಸಿಕೊಂಡರೂ ಇವುಗಳಲ್ಲಿ ಯಾವುದಾದರೊಂದನ್ನು ಲೇಪಿಸಿಕೊಳ್ಳಿ. ಚರ್ಮಕ್ಕೆ ಹೆಚ್ಚಿನ ಹಾನಿಯಾಗದಂತೆ ಇವು ತಡೆಯುತ್ತವೆ.

ಮುಖದಲ್ಲಿ ಮೊಡವೆ, ದೇಹದ ಯಾವುದೇ ಭಾಗದಲ್ಲಿ ಕುರ ಬಿದ್ದಿದ್ದರೆ ಬಣ್ಣಗಳಿಂದ ದೂರವಿರಿ. ಯಾರಾದರೂ ಆಗ್ರಹಪೂರ್ವಕ ಬಣ್ಣ ಹಚ್ಚಿದರೂ ಅದನ್ನು ತೆಗೆಯಲು ನೀರು ಬಳಸಬೇಡಿ. ಅದರ ಬದಲು ಹಸಿ ಹಾಲಿಗೆ ಕಡಲೆಹಿಟ್ಟು ಬೆರೆಸಿದ ಪೇಸ್ಟ್‌ ಹಚ್ಚಿ ನಂತರ ಮುಖ ತೊಳೆದುಕೊಳ್ಳಿ.

ಕೂದಲಿಗೆ: ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಿಸಿ ಮಾಡಿ ತಲೆಕೂದಲಿನ ಬುಡದಿಂದಲೇ ಹಚ್ಚಿಕೊಂಡು ಮಸಾಜ್‌ ಮಾಡಿಕೊಳ್ಳಿ. ತಲೆಬುರುಡೆಗೆ ಎಣ್ಣೆ ಹೀರಿಕೊಂಡರೆ ಬಣ್ಣಗಳು ಹಾನಿ ಮಾಡುವ ಸಾಧ್ಯತೆ ಕಡಿಮೆ. ಬಣ್ಣ ಹಚ್ಚುವುದಕ್ಕೂ ಅರ್ಧ ಗಂಟೆಗೆ ಮುಂಚಿತವಾಗಿ ಎಣ್ಣೆ ಹಚ್ಚಿಕೊಳ್ಳಿ.

ತೆಗೆದ ನಂತರ: ಓಕುಳಿಯಾಟದ ನಂತರ ಶುದ್ಧ ನೀರಿನಿಂದ ಬಣ್ಣ ತೆಗೆಯಿರಿ. ಮಾಯಿಶ್ಚರೈಸಿಂಗ್‌ ವೈಪ್‌ ಮೂಲಕ ಒಂದು ಹಂತದ ಬಣ್ಣವನ್ನು ಸ್ವಚ್ಛಗೊಳಿಸಿ, ನೀರು ಬಳಸಿ ತೊಳೆಯಿರಿ. ಬಣ್ಣಗಳು ಬಿದ್ದಾಗ ಚರ್ಮದ ರಂಧ್ರಗಳು ತೆರೆದುಕೊಳ್ಳುವ ಕಾರಣ ರಾಸಾಯನಿಕ ಹೀರಲ್ಪಡುತ್ತದೆ. ಹಾಗಾಗಿ ಉತ್ತಮ ಗುಣಮಟ್ಟದ ಕ್ಲೆನ್ಸಿಂಗ್ ಮಿಲ್ಕ್‌, ಫೇಸ್‌ ಲೋಶನ್‌ ಬಳಸಿ ಮೃದುವಾಗಿ ವೃತ್ತಾಕಾರವಾಗಿ ತಿಕ್ಕುತ್ತಾ ತೊಳೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT