ಅಂಚೆ ಪತ್ರದ ಮೂಲಕ ಮತದಾನದ ಜಾಗೃತಿ

ಗುರುವಾರ , ಮಾರ್ಚ್ 21, 2019
32 °C

ಅಂಚೆ ಪತ್ರದ ಮೂಲಕ ಮತದಾನದ ಜಾಗೃತಿ

Published:
Updated:
Prajavani

ವಿಜಯಪುರ: ದೇಶದ ಉಜ್ವಲ ಭವಿಷ್ಯ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಮಕ್ಕಳ ಮೂಲಕ ಪಾಲಕರಿಗೆ ಅಂಚೆ ಪತ್ರದ ಮೂಲಕ ಜಾಗೃತಿಗೊಳಿಸುವ ವಿಶೇಷ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಜಿ.ಪಂ. ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ವಿಕಾಸ್‌ ಕಿಶೋರ್ ಸುರಳಕರ್‌ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಡಯಟ್ ಪ್ರಾಂಶುಪಾಲರು, ಜಿಲ್ಲೆಯ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಿಡಿಒಗಳ ಜತೆ ಸ್ವೀಪ್ ಚಟುವಟಿಕೆ ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ನಡೆಸಿದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಮಕ್ಕಳು ತಮ್ಮ ಪಾಲಕರಿಗೆ ಅಂಚೆ ಪತ್ರದ ಮೂಲಕ ಜಾಗೃತಿ ಮೂಡಿಲಿಕ್ಕಾಗಿ ಈ ವಿಶೇಷ ಅಭಿಯಾನವನ್ನು ಮುಂದಿನ ಐದು ದಿನಗಳಲ್ಲಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮಕ್ಕಳು ಅಂಚೆ ಪತ್ರದ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗುವುದರಿಂದ, 4 ಲಕ್ಷ ಕುಟುಂಬಕ್ಕೆ ಈ ಪತ್ರ ಮಕ್ಕಳಿಂದಲೇ ಲಭ್ಯವಾಗಲಿದ್ದು, ಪರೀಕ್ಷೆಗಳು ಮುಗಿಯುವ ಮುಂಚಿತವಾಗಿ ಈ ಕ್ರಮವನ್ನು ಕೈಗೊಂಡು, ಪಾಲಕರಲ್ಲಿ ಜಾಗೃತಿ ಮೂಡಿಸುವಂತೆ ಸಿಇಒ ಸೂಚನೆ ನೀಡಿದರು.

ಮಹಿಳೆಯರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಮಹಿಳೆಯರಿಗಾಗಿ ವಿಶೇಷ ರಂಗೋಲಿ, ಚಿತ್ರಕಲಾ ಸ್ಪರ್ಧೆ, ಜಾಥಾ, ಕ್ಯಾಂಡಲ್ ಮಾರ್ಚ್‌ಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !