24ರಂದು ‘ಜಹನಾರಾ’ ಪುಸ್ತಕ ಬಿಡುಗಡೆ

7

24ರಂದು ‘ಜಹನಾರಾ’ ಪುಸ್ತಕ ಬಿಡುಗಡೆ

Published:
Updated:
Deccan Herald

ಮೊಗಲ್ ಚಕ್ರವರ್ತಿ ಷಹಜಹಾನನ ಮಗಳು ಬೇಗಂ ಜಹನಾರಾ ತನ್ನ ದುರಂತ ಜೀವನಗಾಥೆ ಒಳಗೊಂಡ ಆತ್ಮಕಥೆಯ ಕೈ ಬರಹದ ಕಾಗದಗಳ ಗಂಟನ್ನು 1667ರಲ್ಲಿ ಆಗ್ರಾ ಕೋಟೆಯ ಜೆಸ್ಸಾಮಿನ್ ಗೋಪುರದ ಗೋಡೆಯಲ್ಲಿ ಬಚ್ಚಿಟ್ಟಿದ್ದಳು.

260 ವರ್ಷಗಳ ನಂತರ ಅಂದರೆ 1927ರಲ್ಲಿ ಸ್ವೀಡಿಶ್ ಮಹಿಳೆ ಆಂಡ್ರಿಯಾ ಬ್ಯುಟೆನ್ ಸ್ಕೋನ್ ಸಂಶೋಧನೆ ಮಾಡಿದಾಗ ಈ ಕಾಗದಗಳ ಗಂಟು ದೊರೆಯಿತು. ಜಹನಾರಾಳ ಕುತೂಹಲಕರವಾದ ಜೀವನದ ಬಗ್ಗೆ ಆಂಡ್ರಿಯಾ ಆಸಕ್ತಿ ವಹಿಸಿ ಅವಳ ಸ್ಮೃತಿಯ ಪುಟಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ, ‘The life of moghul Princess-Jahanara, daughter of Shahajahan'  ಎಂಬ ಹೆಸರಿನಲ್ಲಿ 1931ರಲ್ಲಿ ಪ್ರಕಟಿಸಿದ್ದಾರೆ.

1993ರಲ್ಲಿ ಈ ಆಂಗ್ಲ ಅನುವಾದದ ಆತ್ಮಕಥೆ ನನ್ನ ಕೈಗೆ ಸೇರಿತು. ಈ ಪುಸ್ತಕದ ಸಹಜ ಬರಹ ನನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು. ಆಕೆಯ ರೋಚಕ, ಹಲವೊಮ್ಮ ಹೃದಯವಿದ್ರಾವಕ ಜೀವನ ಇನ್ನಿಲ್ಲದಂತೆ ಕಾಡತೊಡಗಿತು. ಈ ಕೃತಿಯನ್ನು  1995ರಲ್ಲಿ ಕನ್ನಡಕ್ಕೆ ಅನುವಾದಿಸಿದೆ. ಈಗ ಎರಡು ದಶಕಗಳ ನಂತರ 2015ರಲ್ಲಿ ಗೆಳೆಯ, ಮೆ.ಸಂಪದ ಪಬ್ಲಿಕೇಷನ್ಸ್‌ನ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀವಿನಾಯಕ್ ಇವರು ಚಾರಿತ್ರಿಕ ದಾಖಲೆಯ ಮಹತ್ವವನ್ನು ಪರಿಗಣಿಸಿ, ‘ಜಹನಾರಾ–ಹಿಂದೂ ಮಹಾರಾಣಿಯಾಗಲು ಭ್ರಮಿಸಿದ್ದ ಮೊಗಲ್ ಬಾದಶಹ ಬೇಗಮ್‌ಳ ದುರಂತ ಜೀವನ ಸ್ಮೃತಿ’ ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಸದರಿ ಪುಸ್ತಕವನ್ನು ಸಹೃದಯ ಓದುಗರ ಮುಂದಿಡಲು ಹರ್ಷಿಸುತ್ತೇನೆ.

–ಸಂತೆ ನಾರಾಯಣಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !