ಜೈನರ ಧಾರ್ಮಿಕ ಸಭೆ ಜ.26 ರಂದು

7

ಜೈನರ ಧಾರ್ಮಿಕ ಸಭೆ ಜ.26 ರಂದು

Published:
Updated:

ವಿಜಯಪುರ: ಜಿಲ್ಲಾ ಜೈನ ನೌಕರರ ವೇದಿಕೆ, ಭಾರತೀಯ ಜೈನ ಮಿಲನ ಶಾಖೆ, ಜಿಲ್ಲಾ ಜೈನ ಯುವಕ ಸಂಘ, ನಾಗಚಂದ್ರ ಕವಿ ಟ್ರಸ್ಟ್, ಹಾಗೂ ಜೈನ ಮಹಿಳಾ ಸಂಘದ ವತಿಯಿಂದ ಧಾರ್ಮಿಕ ಸಭೆ ಹಾಗೂ ಧಾರ್ಮಿಕ ಸೇವಾ ಗಣ್ಯರಿಗೆ, ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಜ.26ರ ಶನಿವಾರ ಸಂಜೆ 5 ಗಂಟೆಗೆ ನಗರದ ದರ್ಗಾ ಜೈಲ್ ರಸ್ತೆಯಲ್ಲಿರುವ ಸಹಸ್ರಫಣಿ 1008 ಪಾರ್ಶ್ವನಾಥ ಜೈನ ಮಂದಿರದಲ್ಲಿ ಆಯೋಜಿಸಲಾಗಿದೆ.

ಚಡಚಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾವೀರ ಮಾಲಗಾಂವಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯೆ ಡಾ.ಪದ್ಮಿನಿ ನಾಗರಾಜು ಉಪನ್ಯಾಸಕರಾಗಿ ಪಾಲ್ಗೊಳ್ಳುವರು.

ವಿಜಯಪುರ ಜಿಲ್ಲಾ ಪಂಚಾಯ್ತಿಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್‌ ಜಿನ್ನಪ್ಪ ಶೆಟ್ಟಿ ಉಪಸ್ಥಿತರಿರುವರು ಎಂದು ವಿಜಯಪುರ ಜಿಲ್ಲಾ ಜೈನ ಶಿಕ್ಷಕರ ವೇದಿಕೆ ಅಧ್ಯಕ್ಷ ಅನಿಲ ಇರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !