ಭಾನುವಾರ, ಡಿಸೆಂಬರ್ 8, 2019
25 °C
ನಿರ್ಮಲಾ ಸೀತಾರಾಮನ್‌ ಹಾಗೂ ಜೇಮ್ಸ್‌ ಮ್ಯಾಟಿಸ್‌ ಮಾತುಕತೆ

ರಕ್ಷಣಾ ಕ್ಷೇತ್ರ ಸಂಬಂಧ ಗಟ್ಟಿಗೊಳಿಸಲು ಭಾರತ–ಅಮೆರಿಕ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ವಾಷಿಂಗ್ಟನ್‌: ಭಾರತದ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಹಾಗೂ ಅಮೆರಿಕದ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ನಡುವೆ ಇಲ್ಲಿನ ಪೆಂಟಗಾನ್‌ನಲ್ಲಿ ನಾಲ್ಕನೇ ಸುತ್ತಿನ ಮಾತುಕತೆ ನಡೆಯಿತು.

ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟೂ ಗಟ್ಟಿಗೊಳಿಸಲು ಉಭಯ ನಾಯಕರು ಸಮ್ಮತಿಸಿದರು.

‘ಹಿಂದೂ ಮಹಾಸಾಗರ ಮತ್ತು ಪ್ಯಾಸಿಫಿಕ್ ವಲಯ ಹಾಗೂ ಜಾಗತಿಕ ಮಟ್ಟದಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಸ್ಥಿರತೆ ಕಾಪಾಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ಮ್ಯಾಟಿಸ್‌ ಶ್ಲಾಘಿಸಿದರು.

ಪ್ರಮುಖ ಪಾಲುದಾರ: ‘ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೆರಿಕ ನಮ್ಮ ಪ್ರಮುಖ ಪಾಲುದಾರ ಎಂದೇ ಭಾರತ ಪರಿಗಣಿಸುತ್ತದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

‘ಅಮೆರಿಕದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ನೀತಿ ನಿರೂಪಣೆಯಲ್ಲಿ ಸಹ ಉಭಯ ದೇಶಗಳ ರಕ್ಷಣಾ ಸಂಬಂಧಕ್ಕೆ ಮಹತ್ವದ ಸ್ಥಾನ ನೀಡಿರುವುದು ಸಂತಸದ ವಿಷಯ’ ಎಂದೂ ಅವರು ಹೇಳಿದರು.

ಎಲ್ಲ ಸಮಸ್ಯೆಗಳಿಗೂ ಪರಿಹಾರ: ಭಾರತ– ರಷ್ಯಾ ಒಪ್ಪಂದ ಕುರಿತು ಜೇಮ್ಸ್‌ ಮ್ಯಾಟಿಸ್‌ ಪ್ರತಿಕ್ರಿಯೆ

‘ರಷ್ಯಾದಿಂದ ಭಾರತವು ಎಸ್‌–400 ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಉದ್ಭವವಾಗುವ ಎಲ್ಲ ಸಮಸ್ಯೆಗಳನ್ನು ಉಭಯ ದೇಶಗಳು ಪರಿಹರಿಸಿಕೊಳ್ಳಲಿವೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಮ್ಯಾಟಿಸ್‌ ಹೇಳಿದರು.

ಕ್ಷಿಪಣಿ ಖರೀದಿ ಮತ್ತು  ಅಮೆರಿಕದಿಂದ ಸಂಭಾವ್ಯ ನಿರ್ಬಂಧದ ಬಗ್ಗೆ ಅಮೆರಿಕ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಜತೆಗಿದ್ದ ಮ್ಯಾಟಿಸ್‌ ಅವರು ಮೇಲಿನಂತೆ ಉತ್ತರಿಸಿದರು.

ಎಸ್‌–400 ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಗೆ ರಷ್ಯಾ ಮತ್ತು ಭಾರತ ಒಪ್ಪಂದಕ್ಕೆ ಸಹಿ ಹಾಕಿದ್ದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೇ, ಭಾರತದ ಮೇಲೆ ಅಮೆರಿಕೆ ಆರ್ಥಿಕ ನಿರ್ಬಂಧ ಹೇರುವ ಸಾಧ್ಯತೆ ಇರುವುದರಿಂದ ಈ ಹೇಳಿಕೆಗೆ ಮಹತ್ವದ ಬಂದಿದೆ.

‘ಬಹಳ ವರ್ಷಗಳ ಕಾಲ ಭಾರತವು ಅಲಿಪ್ತ ನೀತಿಯನ್ನು ಅನುಸರಿಸಿದ್ದರೂ ರಷ್ಯಾದಿಂದ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿ ಮಾಡಿದೆ. ಭಾರತ ಮತ್ತು ಅಮೆರಿಕ ಎಲ್ಲ ವಿಷಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿವೆ’ ಎಂದೂ ಅವರು ಉತ್ತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು