‘ಜನ ಧ್ವನಿ’ಯಲ್ಲಿ ನವೋದ್ಯಮದ ಮಾತು

7
ಆಯ್ದ ಪ್ರತಿನಿಧಿಗಳಿಂದ ಪ್ರಣಾಳಿಕೆಗಾಗಿ ಮಾಹಿತಿ ಸಂಗ್ರಹಿಸಿದ ಚಿದಂಬರಂ

‘ಜನ ಧ್ವನಿ’ಯಲ್ಲಿ ನವೋದ್ಯಮದ ಮಾತು

Published:
Updated:
Prajavani

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ 11 ಸಾವಿರ ನವೋದ್ಯಮಗಳು ಸ್ಥಾಪನೆಗೊಂಡಿದ್ದು, ಸುಮಾರು 8 ಲಕ್ಷ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಮ್‌ದಾರ್‌ ಹೇಳಿದರು.

ಈ ನವೋದ್ಯಮಗಳಿಗೆ ಅಗತ್ಯವಿರುವ ಕೌಶಲ ಹೊಂದಿದ ಅಭ್ಯರ್ಥಿಗಳನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಪೂರಕ ವ್ಯವಸ್ಥೆ ಮಾಡಲು ಪ್ರಣಾಳಿಕೆಯಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ‘ಜನ ಧ್ವನಿ’ ಕಾರ್ಯಕ್ರಮದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 50 ಕ್ಕೂ ಹೆಚ್ಚು ಪ್ರತಿನಿಧಿಗಳಿಂದ ಪಕ್ಷದ ಪ್ರಣಾಳಿಕೆ ರೂಪಿಸಲು ಮಾಹಿತಿ ಸಂಗ್ರಹಿಸಲಾಯಿತು. ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ ಮತ್ತು ರಾಜೀವ್‌ ಗೌಡ ಭಾಗವಹಿಸಿದ್ದರು.

ದೇಶದಲ್ಲಿ ಆರ್ಥಿಕ ಕ್ರಾಂತಿ ಸೃಷ್ಟಿಯಾಗಬೇಕಿದ್ದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲೆ ಹಣದ ಹೂಡಿಕೆಯನ್ನು ಎರಡು ಪಟ್ಟು ಹೆಚ್ಚಿಸಬೇಕು. ದೇಶದಲ್ಲಿರುವ ‍ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಬೇಕು ಎಂದು ಮಜುಮ್‌ದಾರ್‌ ಹೇಳಿದರು.

ಡಿಜಿಟಲ್‌ ಆರ್ಥಿಕ ವ್ಯವಸ್ಥೆಗೆ ಒತ್ತುಕೊಡಬೇಕು. ದೇಶದಲ್ಲಿ 80 ಕೋಟಿ ಜನ ಮೊಬೈಲ್‌ ಹೊಂದಿದ್ದಾರೆ. ಆರ್ಥಿಕ ಸುಧಾರಣೆಗೆ ಮೊಬೈಲ್‌ ಅನ್ನು ಪ್ರಧಾನ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರ್ಥಿಕ ತಜ್ಞ ಡಾ.ಜಿ.ಗೋವಿಂದರಾವ್‌ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಗಮನಹರಿಸಬೇಕು ಅದಕ್ಕಾಗಿ ನೀರಾವರಿ, ವಿಸ್ತರಣೆ, ಮಣ್ಣಿನ ಆರೋಗ್ಯ, ಅಂತರ್ಜಲ ವೃದ್ಧಿ ಮತ್ತು ಮಳೆ ನೀರು ಸಂಗ್ರಹದತ್ತ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.

ನೋಟು ರದ್ದತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಾಶ ಮಾಡಿತು. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಬಂಡವಾಳ ಹೂಡಿಕೆ ಮತ್ತು ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !