ಬೇಗೂರು ವಾರ್ಡ್‌ನಲ್ಲಿ ‘ಜನಸ್ಪಂದನ’: ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಜನತೆ

7

ಬೇಗೂರು ವಾರ್ಡ್‌ನಲ್ಲಿ ‘ಜನಸ್ಪಂದನ’: ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಜನತೆ

Published:
Updated:
Deccan Herald

ಬೆಂಗಳೂರು: ಬೇಗೂರು ವಾರ್ಡಿನ ನಾಗರಿಕ ಸಮಸ್ಯೆಗಳ ಕುರಿತು ಚರ್ಚಿಸುವ ಜನಸ್ಪಂದನ ಕಾರ್ಯಕ್ರಮ ಭಾನುವಾರ ವಿಶ್ವಪ್ರಿಯ ಬಡಾವಣೆಯಲ್ಲಿ ನಡೆಯಿತು.

ಸಂಸದ ಡಿ.ಕೆ. ಸುರೇಶ್, ಬಿಬಿಎಂಪಿ ಬೊಮ್ಮನಹಳ್ಳಿ ಜಂಟಿ ಆಯುಕ್ತೆ ಡಾ.ಸೌಜನ್ಯಾ, ಪಾಲಿಕೆ ಸದಸ್ಯ ಎಂ.ಆಂಜನಪ್ಪ ಜನರ ಸಮಸ್ಯೆ ಆಲಿಸಿದರು.

‘ಜನರು ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನ ಸೆಳೆದರು. ಬೇಗೂರು ಕೆರೆ ಅಭಿವೃದ್ಧಿಗಾಗಿ ನೀರು ಖಾಲಿ ಮಾಡಿದ್ದರಿಂದ ಈ ಭಾಗದ ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಇತ್ತ ಕಾವೇರಿ ನೀರು ಕೊಡುವಲ್ಲಿ ವಿಳಂಬ ಆಗುತ್ತಿದೆ. ಬೇಸಿಗೆ ಬಂದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಸದ್ಯ ನೀರಿಗಾಗಿ ಖಾಸಗಿ ಟ್ಯಾಂಕರ್ ಅವಲಂಬಿಸಬೇಕಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು.

‘ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ವಾರಕ್ಕೊಮ್ಮೆಯೂ ಕಸದ ಗಾಡಿ ಬರುವುದಿಲ್ಲ. ಎಷ್ಟು ದಿನ ಮನೆಯಲ್ಲೇ ಕಸ ಇಟ್ಟುಕೊಂಡಿರಲು ಸಾಧ್ಯ?’ ಎಂದು ಗೃಹಿಣಿಯೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೇಗೂರು ರಸ್ತೆ ವಿಸ್ತರಣೆ, ರಸ್ತೆ ಡಾಂಬರೀಕರಣ, ಯುಜಿಡಿ ಲೈನ್, ಸಾರ್ವಜನಿಕ ಶೌಚಾಲಯ ಕುರಿತು ನಾಗರಿಕರು ಪ್ರಶ್ನೆಗಳ ಸುರಿಮಳೆಗರೆದರು.

ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಸಂಸದ ತರಾಟೆಗೆ ತೆಗೆದುಕೊಂಡರು.

‘110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಕಾರ್ಯ ನಡೆಯುತ್ತಿದೆಯಾದರೂ, ನೀರಿನ ಕೊರತೆ ಇದೆ. ನೀರಿನ ಸಮಸ್ಯೆ ನೀಗಬೇಕಾದರೆ ಎರಡು ವರ್ಷವಾದರೂ ಬೇಕು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 35 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಅಂತಿಮ ಹಂತದಲ್ಲಿದೆ. ಸ್ಟೇಡಿಯಂ ನಿರ್ಮಾಣಕ್ಕೆ ₹ 6 ಕೋಟಿ ಅನುದಾನ ಒದಗಿಸಲಾಗಿದ್ದು ಇನ್ನೂ ₹ 4 ಕೋಟಿ ನೀಡುವಂತೆ ಪಾಲಿಕೆಯನ್ನು ಕೋರಲಾಗಿದೆ’ ಎಂದು ಸುರೇಶ್‌ ಹೇಳಿದರು.

ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರ, ಲ್ಯಾಪ್‌ಟಾಪ್‌, ಅಂಗವಿಕಲರಿಗೆ ಸೈಕಲ್ ವಿತರಿಸಲಾಯಿತು. ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಸಿದ್ದೇಗೌಡ, ಮಹಿಳಾ ಕಾಂಗ್ರೆಸ್ ನಾಯಕಿ ಸುಷ್ಮಾ ರಾಜ
ಗೋಪಾಲರೆಡ್ಡಿ, ಎಸಿಪಿ ರಮೇಶ್, ಕಾಂಗ್ರೆಸ್ ಮುಖಂಡ ಮೋಹನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !