ಮಂಗಳವಾರ, ನವೆಂಬರ್ 19, 2019
27 °C
ಜಪಾನ್‌: ಹಗಿಬಿಸ್‌ ಚಂಡಮಾರುತದಿಂದ ಹಾನಿ

ಪುನರ್ವಸತಿಗೆ ₹ 46 ಕೋಟಿ

Published:
Updated:
Prajavani

ಟೋಕಿಯೊ: ಹಗಿಬಿಸ್‌ ಚಂಡಮಾರುತದಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳ ಪುನರ್ವಸತಿ ಹಾಗೂ ಪುನರ್‌ರಚನೆಗಾಗಿ ₹ 46 ಕೋಟಿ (65 ಲಕ್ಷ ಡಾಲರ್‌) ತೆಗೆದಿರಿಸಲಾಗಿದೆ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ಬುಧವಾರ ಹೇಳಿದ್ದಾರೆ.

ಕಳೆದ ಶನಿವಾರ ಅಪ್ಪಳಿಸಿದ ಈ ಚಂಡಮಾರುತದಿಂದ 74 ಜನ ಸಾವನ್ನಪ್ಪಿದ್ದಾರೆ. ಮಳೆ– ಭೂಕುಸಿತದಿಂದಾಗಿ ಹಲವಾರು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.

‘10 ಸಾವಿರಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರೆ, ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ’ ಎಂದು ಸರ್ಕಾರದ ವಕ್ತಾರ ಯೋಶಿಹಿಡೆ ಸುಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 

‘ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಫುಕುಶಿಮಾ ಪ್ರಾಂತ್ಯದಲ್ಲಿ ಗರಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಕೇಂದ್ರೀಯ ಜಪಾನ್‌ನ ನಗಾನೊ ಮತ್ತು ನಿಯಿಗಟಾ ಪ್ರದೇಶಗಳಲ್ಲಿ ಸಂಚರಿಸುವ ಶಿಂಕನ್‌ಸೆನ್‌ ಬುಲೆಟ್‌ ರೈಲಿನ ಓಡಾಟವನ್ನು ರದ್ದುಗೊಳಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)